ನ್ಯೂಯಾರ್ಕ್: ಕುಟುಂಬವೊಂದು ಕರಡಿಯ ಹಸಿ ಮಾಂಸ ತಿಂದು ಅಪರೂಪದ ಹಾಗೂ ಭಯಾನಕ ರೋಗಕ್ಕೆ ಇಡೀ ಕುಟುಂಬ ತುತ್ತಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಈ ಕುಟುಂಬ ಅಪಾಯಕಾರಿ ಮೆದುಳು ಹುಳುಗಳ ಸೋಂಕಿಗೆ ತುತ್ತಾಗಿದ್ದಾರೆ. 2022ರಲ್ಲಿ ಈ ಕುಟುಂಬ ಕರಡಿ ಮಾಂಸ ತಿಂದಿದ್ದರಿಂದಾಗಿ ಈ ರೋಗ ಕಾಣಿಸಿಕೊಂಡಿದೆ. ಅಮೆರಿಕದ ಮಿನ್ನಿಸೋಟಾದ 29 ವರ್ಷದ ವ್ಯಕ್ತಿ ಜ್ವರ, ಮಾಂಸ ಖಂಡಗಳ ಸೆಳೆತ ಹಾಗೂ ಕಣ್ಣು ನೋವಿಗೆ ತುತ್ತಾಗಿ ಆಸ್ಪತ್ರೆ ದಾಖಲಾದ ನಂತರ ಈ ವಿಚಾರ ಬೆಳಕಿಗೆ ಬಂದಿದೆ.
ಕೆನಡಾದ ಸಾಸ್ಕಾಚೆವಾನ್ ಪ್ರಾಂತ್ಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಕುಟುಂಬ ಕರಡಿ ಕೊಂದು ತಿಂದಿತ್ತು. ಅಷ್ಟೇ ಅಲ್ಲ, ಈ ಕರಡಿಯ ಮಾಂಸವನ್ನು ಕುಟುಂಬ ಹಲವು ತಿಂಗಳುಗಳ ಕಾಲ ಫ್ರೀಜರ್‌ನಲ್ಲಿ ಇಟ್ಟುಕೊಂಡಿತ್ತು. ಈ ಮಾಂಸವನ್ನು ಎಷ್ಟು ಬೇಯಿಸಿದರೂ ಸರಿಯಾಗಿ ಬೆಂದಿರಲಿಲ್ಲವಂತೆ. ಅರೆ ಬೆಂದಿದ್ದ ಮಾಂಸವನ್ನು ಸೇವಿಸಿದ ಸಂದರ್ಭದಲ್ಲಿ ಈ ಮಿದುಳು ಹುಳಗಳ ಸೋಂಕು ಇಡೀ ಕುಟುಂಬಕ್ಕೆ ತಗುಲಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. 6 ಜನ ಮಿದುಳು ಹುಳಗಳ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 12 ವರ್ಷ ವಯಸ್ಸಿನ ಬಾಲಕಿ ಕೂಡಾ ಸೇರಿದ್ದಾಳೆ. ಸದ ಜೊತೆಗೆ ಬಡಿಸಲಾದ ತರಕಾರಿ ಸೇವಿಸಿದ ಕೆಲವರಿಗೂ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.