Dharwad | ಬೋರವೆಲ್ ಚಾಲೂ ಮಾಡಲು ಹೋಗಿ ರೈತ ಸಾವು
ಧಾರವಾಡ : ಬೋರವೆಲ್ ಚಾಲೂ ಮಾಡಲು ಹೋಗಿ ರೈತ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ನಿಗದಿ ಗ್ರಾಮದಲ್ಲಿ ನಡೆದಿದೆ.
40 ವರ್ಷದ ಆನಂದ ಮೇಟ್ಯಾಳ ಮೃತ ವ್ಯಕ್ತಿಯಾಗಿದ್ದಾರೆ.
ಸಂಜೆ ಹೊಲದಲ್ಲಿ ನೀರು ಹಾಸಲು ಬೋರವೆಲ್ ಫೀಸ್ ಹಾಕುವಾಗ ಆನಂದ ಮೇಟ್ಯಾಳ ಅವರಿಗೆ ಕರೆಂಟ್ ಶಾಕ್ ಹೊಡೆದಿದೆ.

ಪರಿಣಾಮ ರೈತ ಆನಂದ ಮೇಟ್ಯಾಳ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇನ್ನು ಆನಂದ ಮೇಟ್ಯಾಳ ಅವರ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಈ ಸಂಬಂಧ ಧಾರವಾಡ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.