ಯಾದಗಿರಿ: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವನ್ನಪ್ಪಿರುವ (dies) ಘಟನೆ ತಾಲೂಕಿನ ಯರಗೋಳ ಹತ್ತಿರದ ಅಡಮಡಿ ತಾಂಡಾದಲ್ಲಿ ನಡೆದಿದೆ.
ಕಾಶಿನಾಥ್ ಚೌಹಾಣ್ (14) ಮೃತ ಬಾಲಕ. ಮನೆ ಮುಂಭಾಗದಲ್ಲಿನ ಗದ್ದೆಯಲ್ಲಿ ಭತ್ತ ನಾಟಿ ಮಾಡಲು ಹೋಗಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.








