ಚೆನ್ನೈ: ಪ್ರೀತಿಸಿದ ಯುವತಿಯನ್ನು ಮದುವಾಯಾಗುವುದಕ್ಕಾಗಿ ಲಿಂಗವನ್ನೇ ಬದಲಾಯಿಸಿಕೊಂಡಿದ್ದ ಮಾಜಿ ಸಹಪಾಠಿ, ಆಕೆ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ನಡೆದಿದೆ.
ಈ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ. 24 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ನಂದಿನಿ ಕೊಲೆಯಾದ ದುರ್ದೈವಿ. ದಕ್ಷಿಣ ಉಪನಗರವಾದ ಕೆಲಂಬಾಕ್ಕಂ ಹತ್ತಿರದ ತಲಂಬೂರ್‌ನಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ವೆಟ್ರಿಮಾರನ್ ಅಲಿಯಾಸ್ ಪಾಂಡಿ ಮಹೇಶ್ವರಿ (26) ಹತ್ಯೆ ಮಾಡಿದ ರೋಪಿ.
ಮಧುರೈ ಮೂಲದ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ನಂದಿನಿ ಚೆನ್ನೈನಲ್ಲಿ ನೆಲೆಸಿದ್ದರು. ನಂದಿನಿ ಸಹಪಾಠಿಯಾಗಿದ್ದ ಪಾಂಡಿ ಮಹೇಶ್ವರಿ ಲಿಂಗ ಬದಲಾಯಿಸಿಕೊಂಡು ವೆಟ್ರಿಮಾರನ್ ಆಗಿದ್ದ. ಗೆಳತಿಯ ಮೇಲಿನ ಪ್ರೀತಿಯಿಂದಾಗಿಯೇ ಲಿಂಗ ಬದಲಾಯಿಸಿಕೊಂಡಿದ್ದಳು ಎನ್ನಲಾಗಿದೆ. ನಂತರ ವೆಟ್ರಿಮಾರನ್ ಆಗಿ ಬದಲಾಗಿದ್ದ.
ಚೆನ್ನೈನಲ್ಲಿ ಸ್ನೇಹಿತರಾಗಿದ್ದ ಇವರು ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ಆದರೆ, ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ನಂದಿನಿ, ವೆಟ್ರಿಮಾರನ್ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರವೂ ಸ್ನೇಹವನ್ನು ಮುಂದುವರೆಸಿದ್ದಳು. ತೊರೈಪಾಕ್ಕಂನಲ್ಲಿರುವ ಖಾಸಗಿ ಐಟಿ ಸಂಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಂದಿನಿ ಬೇರೆಯವರ ಮೇಲೆ ಆಸಕ್ತಿ ಹೊಂದಿದ್ದಾಳೆ ಎಂಬ ಶಂಕೆಯಿಂದಾಗಿ ವೆಟ್ರಿಮಾರನ್ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.