ಕೋಲಾರ : ಇತ್ತೀಚೆಗೆ ಕಳ್ಳತನಕ್ಕಾಗಿ ಚಿನ್ನದ ಗಣಿಗೆ ಇಳಿದು ಪ್ರಾಣ ಕಳೆದುಕೊಂಡಿದ್ದ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ಕೆಜಿಎಫ್ ಬಳಿಯ ಬಿಜಿಎಂಎಲ್ ಗೆ ಸೇರಿದ ನಂದಿ ದುರ್ಗ ಮೈನ್ಸ್‌ನಲ್ಲಿ ಕಳ್ಳತನ ಮಾಡಲು ವಿಫಲ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ನಂದಿ ದುರ್ಗ ಮೈನ್ಸ್‌ಗೆ ಬುಧವಾರ ಚಿನ್ನದ ಮಿಶ್ರಿತ ಮಣ್ಣನ್ನು ಕದಿಯಲು ಕಳ್ಳರ ಒಂದು ತಂಡ ಬಂದಿದೆ. ಚಿನ್ನದ ಅದಿರನ್ನು ಕೊರೆಯಲು ಡ್ರಿಲ್ಲಿಂಗ್ ಯಂತ್ರವನ್ನು ಸಹ ತಂದಿದ್ದಾರೆ. ನಂತರ ಗಣಿಯೊಳಗೆ ತಂದಿದ್ದ ಊಟವನ್ನು ಸೇವಿಸಿ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಕೂಡಲೇ ಮಾಹಿತಿ ತಿಳಿದ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಅಧಿಕಾರಿಗಳು ಹೋಗುವಷ್ಟರಲ್ಲಿ ಕಳ್ಳರ ಗುಂಪು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಎಂದು ತಿಳಿದು ಬಂದಿದೆ. ಕೆಲವೇ ದಿನಗಳ ಹಿಂದೆ ಇದೇ ರೀತಿ ಮಾರಿಕುಪ್ಪಂನಲ್ಲಿರುವ ಚಿನ್ನದ ಗಣಿಗೆ ಇಳಿದಿದ್ದ ಮೂವರು ಕಳ್ಳರು ಉಸಿರುಗಟ್ಟಿ ಸತ್ತಿದ್ದರು. ಮತ್ತೊಬ್ಬನ ಒಬ್ಬನ ಶವ ಇನ್ನೂ ಸಹ ಗಣಿಯೊಳಗೆ ಇದೆ. ನಂತರ ಸಿಕ್ಕಿ ಬಿದ್ದಿದ್ದ ಗಣಿ ಕಳ್ಳನಿಗೆ ಕೊರೋನಾ ಸೋಂಕು ಸಹ ಪತ್ತೆಯಾಗಿತ್ತು. ಅದಾಗ್ಯೂ
ಇಂತಹ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಇದ್ದರೂ, ಕಳ್ಳರು ಗಣಿಗೆ ನುಗ್ಗಿರುವುದು ಆಶ್ವರ್ಯ ತಂದಿದೆ. ಇನ್ನೂ ಬಿಜಿಎಂಎಲ್ ಮುಖ್ಯ ಭದ್ರತಾ ಅಧಿಕಾರಿಗಳು ಕೆಜಿಎಫ್ ನ ಊರಿಗಾಂ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೂ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.