ಹಿಂದೂ ಮಹಿಳೆ ಸಿಂಧೂರ ಧರಿಸಲು ನಿರಾಕರಿಸುವುದು ಮದುವೆಯೆಂದು ಪರಿಗಣಿಸಲಾಗದು : ಗೌಹತಿ ಎಚ್‌ ಸಿ

ಗೌಹಾತಿ :ವಿಚ್ಛೇದನದ ಅರ್ಜಿ ವಿಚಾರಣೆಯ ವೇಳೆ ಹಿಂದೂ ವಿವಾಹಿತ ಮಹಿಳೆಯೊಬ್ಬಳು ಸಿಂಧೂರ ಮತ್ತು ಶಂಖ ಚಿಪ್ಪುಗಳಿಂದ ಮಾಡಿದ ಬಳೆಗಳನ್ನು ಧರಿಸಲು ನಿರಾಕರಿಸಿದ್ದನ್ನು ಗಮನಿಸಿದ ಗೌಹತಿ ಹೈಕೋರ್ಟ್ , ಇದು ಮದುವೆಯಾದವರ ಗುರುತುಗಳಾಗಿವೆ,  ಆಕೆ ಗಂಡನೊಂದಿಗಿನ ತನ್ನ ಮದುವೆಯನ್ನು ಸ್ವೀಕರಿಸಲು ಇಷ್ಟವಿಲ್ಲ ಎಂದು  ಪ್ರತಿಬಿಂಬಿಸುತ್ತದೆ ಎಂದು ಪರಿಗಣಿಸಿ ಕುಟುಂಬ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ರದ್ದುಪಡಿಸಿ ಆಕೆಯ ಗಂಡನಿಗೆ ವಿಚ್ಛೇದನ ನೀಡಲು ಅನುಮತಿಸಿದೆ. “ಅಂತಹ ಸಂದರ್ಭಗಳಲ್ಲಿ, ಪತಿಯನ್ನು ಪತ್ನಿಯೊಂದಿಗೆ ಜೀವನ ನಡೆಸಲು ಒತ್ತಾಯಿಸುವುದು ಕಿರುಕುಳ ಎಂದು ಭಾವಿಸಬಹುದು” ಎಂದು ಮುಖ್ಯ ನ್ಯಾಯಮೂರ್ತಿ ಅಜಯ್ ಲಾಂಬಾ ಮತ್ತು ನ್ಯಾಯಮೂರ್ತಿ ಸೌಮಿತ್ರ ಸೈಕಿಯಾ ಅವರನ್ನೊಳಗೊಂಡ ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .

ಏನಿದು ಪ್ರಕರಣ :

ಫೆಬ್ರವರಿ 2012 ರಲ್ಲಿ ದಂಪತಿಗಳು ಮದುವೆಯಾಗಿದ್ದು , ಒಂದು ತಿಂಗಳ ನಂತರ ಆಕೆ ಗಂಡನೊಂದಿಗೆ ಬೇರೆಯಾಗಿ ವಾಸಮಾಡುವ ಇರಾದೆ ವ್ಯಕ್ತಪಡಿಸಿದಳು . ಇದರಿಂದ ದಂಪತಿಗಳ ನಡುವೆ ಮಾತಿನ ಸಮರವೇ ನಡೆಯುತಿತ್ತು. 2013 ಮನೆಯಿಂದ ಹೊರ ಬಂದ ಈಕೆ ಗಂಡ ಮತ್ತು ಆತನ ಕುಟುಂಬ ಮೇಲೆ ವರದಕ್ಷಿಣೆ ಕಿರುಕುಳದ ಕೇಸು ದಾಖಲಿಸಿದಳು.

ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಲು ನಿರಾಕರಿಸಿತ್ತು. ಇದರಿಂದ ಆಕೆಯ ಗಂಡ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದನು.

ಈ ವಿಚಾರವಾಗಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಜಯ್ ಲಾಂಬಾ ಮತ್ತು ನ್ಯಾಯಮೂರ್ತಿ ಸೌಮಿತ್ರ ಸೈಕಿಯಾ ಅವರನ್ನೊಳಗೊಂಡ ಹೈಕೋರ್ಟ್ ಪೀಠ, ಸಿಂಧೂರ ಮತ್ತು ಶಂಖ ಚಿಪ್ಪುಗಳಿಂದ ಮಾಡಿದ ಬಳೆಗಳನ್ನು ಧರಿಸಲು ಆಕೆ ಕೌಟುಂಬಿಕ ನ್ಯಾಯಾಲಯದಲ್ಲಿ ನಿರಾಕರಿಸಿದ ಹೇಳಿಕೆಯನ್ನು ಪರಿಗಣಿಸಿ ಇಂತಹ ಸಂದರ್ಭಗಳಲ್ಲಿ, ಹೆಂಡತಿಯೊಂದಿಗೆ ವೈವಾಹಿಕ ಸಂಬಂಧವನ್ನು ಮುಂದುವರಿಸಲು ಗಂಡನನ್ನು ಒತ್ತಾಯಿಸುವುದು ಕಿರುಕುಳ ಎಂದು ಭಾವಿಸಬಹುದು,” ಆದುದರಿಂದ ಒಲ್ಲದ ಸಂಬಂಧಕ್ಕೆ ಆಕೆಯ ಗಂಡನಿಗೆ ವಿಚ್ಛೇದನ ನೀಡಲು ಅನುಮತಿಸಿದೆ.

2013 ರ ವರ್ಷದಲ್ಲಿ, ಮಹಿಳೆ ತನ್ನ ವೈವಾಹಿಕ ಮನೆಯನ್ನು ತೊರೆದು ಆತ ಮತ್ತು ಆತನ ಕುಟುಂಬದವರ ಮೇಲೆ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿಕೇಸ್ ದಾಖಲಿಸಿದಳು . ಆದರೆ, ಈ ಪ್ರಕರಣದಲ್ಲಿ ಹೈಕೋರ್ಟ್ ವ್ಯಕ್ತಿ ಮತ್ತು ಆತನ ಕುಟುಂಬವನ್ನು ಖುಲಾಸೆಗೊಳಿಸಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This