ಜೀವ ಉಳಿಸಿದ ಹೆಲ್ಮೆಟ್ Saaksha Tv
ದಾವಣಗೆರೆ: ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ದಾವಣಗೆರೆಯ ಪಿಬಿ ರಸ್ತೆಯ ಸಿಗ್ನಲ್ ಬಳಿ ನಡೆದಿದೆ.
ನಿನ್ನೆ ರಾತ್ರಿ ದಾವಣಗೆರೆಯ ಪಿಬಿ ರಸ್ತೆಯ ಶ್ರಮಜೀವಿ ಲಾಡ್ಜ್ ನ ಮ್ಯಾನೇಜರ್ ಸೈಪುದ್ದೀನ್ ತನ್ನ ಕೆಲಸ ಮುಗಿಸಿಕೊಂಡು ಲಾಡ್ಜ್ನಿಂದ ದ್ವಿಚಕ್ರದಲ್ಲಿ ಹೊರಟಿದ್ದಾರೆ. ಸೈಪುದ್ದೀನ್ ಪಿಬಿ ರಸ್ತೆಯ ಒಂದು ಬದಿಯ ರಸ್ತೆಯನ್ನು ದಾಟಿ, ಮತ್ತೊಂದು ಬದಿಯ ರಸ್ತೆ ದಾಟಲು ಸಿಗ್ನಲ್ ಬಳಿ ನಿಂತಿದ್ದಾರೆ.
ಮತ್ತೊಂದು ಬದಿಯ ವಾಹನಗಳು ದಾಟಲೆಂದು ಸೈಪುದ್ದೀನ್ ನಿಂತಾಗ ಸಿಗ್ನಲ್ ಬಳಿ ಕೆಎಸ್ಆರ್ಟಿಸಿ ಬಸ್ ಒಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಬಸ್ ಗುದ್ದಿದ ರಭಸಕ್ಕೆ ಸ್ಕೂಟಿ ಸಮೇತ ಸವಾರ ನೆಲಕ್ಕೆ ಬಿದ್ದಿದ್ದಾರೆ. ಸವಾರ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ನಡೆಯುತ್ತಿದ್ದಂತೆ ಸೇರಿದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.








