ಪ್ರಿಯತಮನಿಗೆ 10ರೂ ನೋಟ್ ಮೇಲೆ ಸಂದೇಶ ಬರೆದು ಕಳುಹಿಸಿದ ಪ್ರಿಯತಮೆ
ನವದೆಹಲಿ: ನೋಟುಗಳ ಮೇಲೆ ಕವಿತೆ, ಕವನ ಬರೆದಿದ್ದು ನೋಡಿದ್ದೇವೆ, ಆದರೆ ಇಲ್ಲಬೊಬ್ಬ ಪ್ರಿಯತಮೆ 10ರೂ ನೋಟ ಮೇಲೆ ತನ್ನ ಪ್ರಿಯತಮನಿಗೆ ಸಂದೇಶ ಕಳುಹಿಸಿದ್ದಾಳೆ.
ಹೌದು 10ರೂ ನೋಟ ಮೇಲೆ ಸಂದೇಶ ಬರೆದು ಕಳುಹಿಸಿರುವ ಪೋಟೊ ಎಲ್ಲೆಡೆ ಹರದಾಡುತ್ತಿದ್ದು, ನೆಟ್ಟಿಗರು ಪ್ರಿಯತಮನ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡುತ್ತಿದ್ದಾರೆ.
ಇನ್ನೂ ನೋಟಿನ ಮೇಲೆ ಪ್ರಿಯತಮ ವಿಶಾಲ್, ಏಪ್ರಿಲ್ 26ರಂದು ನನ್ನ ಮದುವೆ ಫಿಕ್ಸ್ ಆಗಿದೆ. ಹೀಗಾಗಿ ಆದಷ್ಟು ಬೇಗ ಬಂದು ನನ್ನನ್ನು ಕರೆದುಕೊಂಡು ಹೋಗು. ಐ ಲವ್ ಯೂ. ಇಂತಿ ನಿನ್ನ ಪ್ರಿಯತಮೆ ಕುಸುಮ್ ಎಂದು 10 ರೂ. ನೋಟಿನಲ್ಲಿ ಬರೆಯಲಾಗಿದೆ.
https://twitter.com/vipul2777/status/1516082753925619719?ref_src=twsrc%5Etfw%7Ctwcamp%5Etweetembed%7Ctwterm%5E1516082753925619719%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fwoman-writes-message-for-lover-on-rs-10-note-in-viral-pic%2F
ಈ ರೀತಿ ಬರೆದಿರುವ ನೋಟಿನ ಫೋಟೋ ತೆಗೆದುಕೊಂಡು ಅದನ್ನು ಟ್ವಿಟ್ಟರ್ ಬಳಕೆದಾರ ವಿಪುಲ್ ಶೇರ್ ಮಾಡಿಕೊಂಡಿದ್ದಾರೆ. ಟ್ವಿಟ್ಟರ್, ನಿಮ್ಮ ಶಕ್ತಿಯನ್ನು ತೋರಿಸಿ. ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್‍ಗಳಿಗೆ ಟ್ಯಾಗ್ ಮಾಡಿ. ಅಲ್ಲದೆ ಏಪ್ರಿಲ್ 26 ರ ಮೊದಲು ಕುಸುಮ್ ಅವರ ಈ ಸಂದೇಶವನ್ನು ವಿಶಾಲ್‍ಗೆ ತಲುಪಿಸಬೇಕು. ಈ ಮೂಲಕ ಇವರಿಬ್ಬರು ಕೂಡ ಒಂದಾಗಬೇಕು ಎಂದು ಬರೆದಿದ್ದಾರೆ.
ವಿಪುಲ್ ಈ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಹಲವಾರು ಪರ-ವಿರೋಧ ಕಾಮೆಂಟ್ ಗಳು ಬರಲು ಆರಂಭಿಸಿದವು. ಕೆಲವು ನೆಟ್ಟಿಗರು ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್ ಅನ್ನು ಟ್ಯಾಗ್ ಮಾಡಿ ಎಂದು ನೆಟ್ಟಿಗರು ಬರೆದುಕೊಂಡು ಈ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಅಲ್ಲದೇ ಈ ಫೋಟೋ ವಿಶಾಲ್‍ನ ಸರ್‍ನೇಮ್ ಅನ್ನು ಅಳಿಸಲಾಗಿದ್ದು, ಆ ಸರ್ ನೇಮ್ ಅನ್ನು ಬಹಿರಂಗಪಡಿಸುವಂತೆ ನೆಟ್ಟಿಗರು ವಿನಂತಿಸಿದ್ದಾರೆ.