ಮಂಗಳೂರು : ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕಳಾರ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕಳಾರ ನಿವಾಸಿ ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ.
ಎಂದಿನಂತೆ ನಮಾಜ್ ಮಾಡಲು ಅಬ್ದುಲ್ ಖಾದರ್ ಇಂದು ಕೂಡ ಮುಂಜಾನೆ 4 ಗಂಟೆ ಸುಮಾರಿಗೆ ಮಸೀದಿ ತೆರಳಿದ್ದಾರೆ. ಹೀಗೆ ಬಂದವರೆ ತಮ್ಮ ಪಾಡಿಗೆ ನಮಾಜ್ ಮಾಡುತ್ತಿದ್ದ ಅಬ್ದುಲ್ ಖಾದರ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಆಗ ಅವರ ಪಕ್ಕದಲ್ಲಿದ್ದ ವ್ಯಕ್ತಿ ಖಾದರ್ ಅವರನ್ನು ಎಬ್ಬಿಸಲು ಹೋಗಿದ್ದಾರೆ. ಆದ್ರೆ ಅದಾಗಲೇ ಖಾದರ್ ಮೃತಪಟ್ಟಿದ್ದಾರೆ. ಈ ಎಲ್ಲಾ ದೃಶ್ಯಗಳು ಮಸೀದಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇನ್ನು ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ








