ಬುದ್ಧಿ ಹೇಳಿದ್ದಕ್ಕೆ ಯುವತಿಯ ತಂದೆಯನ್ನೇ ಕೊಂದ ಪಾಗಲ್ ಪ್ರೇಮಿ Bangalore saaksha tv
ಬೆಂಗಳೂರು : ಒನ್ ಸೈಡ್ ಲವ್ ಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಯ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೊರವಲಯ ನೆಲಮಂಗಲದಲ್ಲಿ ನಡೆದಿದೆ.
ನಾಗಪ್ಪ ಕೊಲೆಯಾದ ವ್ಯಕ್ತಿಯಾಗಿದ್ದು, ನರೇಶ್ ಕೊಲೆಯಾಗಿ ಆರೋಪಿಯಾಗಿದ್ದಾನೆ.
ನಾಗಪ್ಪ ಅವರ ಮಗಳನ್ನು ಪ್ರೀತಿಸುತ್ತಿರುವುದಾಗಿ ನರೇಶ್ ಸೋಮವಾರ ಗಲಾಟೆ ಮಾಡಿದ್ದನಂತೆ. ಈ ವಿಚಾರಾಗಿ ಯುವಕ ನರೇಶ್ ಗೆ ನಾಗಪ್ಪ ಬುದ್ಧಿವಾದ ಹೇಳಿದ್ದರಂತೆ.
ಇದರಿಂದ ಕೋಪಕೊಂಡ ಯುವಕ ನರೇಶ್, ಕೆಸಲಕ್ಕೆ ಹೋಗುವ ಸಮಯದಲ್ಲಿ ನಾಗಪ್ಪ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಮೃತ ನಾಗಪ್ಪನ ಸಂಬಂಧಿ ಸುರೇಶ್ ಆರೋಪಿಸಿದ್ದಾರೆ.
ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.









