Belgaum | ಸಹೋದರಿ ಮೇಲೆ ಕಣ್ಣು ಹಾಕಿದ್ದವನಿಗೆ ಸ್ಕೆಚ್
ಬೆಳಗಾವಿ : ಸಹೋದರಿ ಮೇಲೆ ಕಣ್ಣು ಹಾಕಿದ್ದ ಎಂಬ ಕಾರಣಕ್ಕೆ ಯುವಕನನ್ನ ಸ್ನೇಹಿತರೇ ಕೊಲೆ ಮಾಡಿರುವ ಘಟನೆ ಬೆಳಗಾವಿಯ ಮಜಗಾವಿ ಗ್ರಾಮದಲ್ಲಿ ನಡೆದಿದೆ.
37 ವರ್ಷದ ಯಲ್ಲೇಶ ಕೊಲಕಾರ ಕೊಲೆಯಾದ ವ್ಯಕ್ತಿಯಾಗಿದ್ದು, ಸಂದೀಪ ಕೊಲಕಾರ, ಕುಮಾರ ರಾಜಂಗಳಿ, ರವಿ ಗುಳ್ಳೆದಕೊಪ್ಪ, ಪ್ರದೀಪ ಕೊಲಕಾರ, ಶಿವಕುಮಾರ್ ಮಾನೆ ಕೊಲೆ ಆರೋಪಿಗಳಾಗಿದ್ದಾರೆ.
ಯಲ್ಲೇಶ ಕೊಲಕಾರ ಸಂದೀಪ್ ಕೊಲಕಾರ ಸಹೋದರಿಯ ಮೇಲೆ ಕಣ್ಣು ಹಾಕಿದ್ದರಂತೆ.

ಈ ವಿಷಯ ತಿಳಿದ ಸಂದೀಪ್ ಕೊಲಕಾರ, ಸ್ನೇಹಿತರ ಸಹಾಯ ಪಡೆದು ಕೊಲೆ ಮಾಡಿದ್ದಾರೆ.
ಇನ್ನು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೇವಲ 12 ಗಂಟೆಗಳ ಒಳಗೆ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಉದ್ಯಮಬಾಗ ಸಿಪಿಐ ಧೀರಜ ಶಿಂಧೆ ನೇತೃತ್ವದ ತಂಡದಿಂದ ಆರೋಪಿಗಳ ಬಂಧನವಾಗಿದೆ.
ಸದ್ಯ ಐವರು ಆರೋಪಿಗಳನ್ನ ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ.