ಭೋಪಾಲ್: ಸೆಲ್ಫಿ ತೆಗೆದುಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ಸಿಂಹದ ಬಾಯಿಗೆ ಬಿದ್ದಿರುವ ಘಟನೆಯೊಂದು ನಡೆದಿದೆ.
ಈತ ಸೆಲ್ಫಿ ತೆಗೆದುಕೊಳ್ಳಲು ಸಿಂಹಗಳಿರುವ ಆವರಣಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದ್ದು, ಆಂಧ್ರಪ್ರದೇಶದ ತಿರುಪತಿಯಲ್ಲಿರುವ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ. ಪ್ರಹ್ಲಾದ್ ಗುಜ್ಜರ್ (34) ಈ ರೀತಿ ಸಂಕಷ್ಟಕ್ಕೆ ಸಿಲುಕಿರುವ ವ್ಯಕ್ತಿ. ಈತ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬನ್ಸೂರ್ ಪುರಸಭೆಯ ನಿವಾಸಿ. ಈತ ಸುರಕ್ಷತೆ ಪಾಲಿಸದೆ ಸೆಲ್ಫಿ ತೆಗೆದುಕೊಳ್ಳಲು ಸಿಂಹಗಳ ಆವರಣಕ್ಕೆ ನುಗ್ಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿರ್ವಾಹಕರು ಹಾಗೂ ವೈದ್ಯಕೀಯ ಸಿಬ್ಬಂದಿ ಮಾತ್ರ ಹೋಗುವ ಪ್ರವೇಶ ದ್ವಾರದಿಂದ ಈತ ತೆರಳಿದ್ದಾನೆ. ಪ್ರಾಣಿ ಪಾಲಕರು ಹೇಳಿದರೂ ಆತ ಕೇಳಿಲ್ಲ. 6 ಅಡಿ ಎತ್ತರದ ಬೇಲಿ ದಾಟಿ ಸಿಂಹಗಳ ಆವರಣಕ್ಕೆ ಹಾರಿದ್ದಾನೆ. ಈ ಸಂದರ್ಭದಲ್ಲಿ ಆತನ ಮೇಲೆ ಸಿಂಹ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡಿರುವ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಮೃಗಾಲಯದಲ್ಲಿದ್ದ ಡೊಂಗಲ್ಪು’ ಎಂಬ ಸಿಂಹವು ಕೊಂದು ಹಾಕಿದೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.