ಚಿತ್ರದುರ್ಗ: ನವ ವಿವಾಹಿತನೊಬ್ಬ ತನ್ನ ಹೆಂಡತಿಗೆ ಕೈ ಕೊಟ್ಟು ಪಕ್ಕದ ಮನೆಯ ಆಂಟಿ ಜೊತೆ ಪರಾರಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ತಾಲೂಕಿನ ಭೀಮಸಮುದ್ರ (Bhimasamudra)ದಲ್ಲಿ ನಡೆದಿದ್ದು, ಗ್ರಾಮದ ಯಶವಂತ್ ಎಂಬಾತ ಕಳೆದ 5 ವರ್ಷಗಳ ಹಿಂದೆ ಮಂಜುಳಾ ಎಂಬುವವರೊಂದಿಗೆ ವಿವಾಹವಾಗಿದ್ದ. ಆರಂಭದಲ್ಲಿ ಪತಿ ಹಾಗೂ ಪತ್ನಿ ಇಬ್ಬರು ಅನೋನ್ಯವಾಗಿದ್ದರು. ಆದರೆ, ಕಳೆದ 6 ತಿಂಗಳಿಂದ ಪಕ್ಕದ ಮನೆ ಆಂಟಿ ರೇಣುಕ ಎಂಬ ಮಹಿಳೆಯ ಕಾಮಪಾಶದಲ್ಲಿ ಬಿದ್ದಿದ್ದಾನೆ ಎನ್ನಲಾಗಿದೆ.
ಈ ವಿಷಯ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ ಮನೆಯಲ್ಲಿ ಜಗಳ ಆರಂಭವಾಗಿದೆ. ಸದಾ ಕಾಲ ಆಂಟಿಯೊಂದಿಗೆ ಫೋನ್ ನಲ್ಲಿ ಮಾತನಾಡಲು ಆರಂಭಿಸಿದ್ದಾನೆ. 28 ವರ್ಷದ ಈತ, 38 ವರ್ಷದ ಆಂಟಿಯನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದಾನೆ. ಈಗ ಆಂಟಿಯೊಂದಿಗೆ ಪರಾರಿಯಾಗಿದ್ದಾನೆ. ಇನ್ನೊಂದೆಡೆ ರೇಣುಕ ತನ್ನ ಇಬ್ಬರು ಮಕ್ಕಳು ಹಾಗೂ ಗಂಡನನ್ನು ಬಿಟ್ಟು ಯಶವಂತ್ ಜೊತೆ ಪರಾರಿಯಾಗಿದ್ದಾಳೆ. ಈ ಕುರಿತು ಯಶವಂತ್ ಪತ್ನಿ ಗ್ರಾಮಾಂತರ ಠಾಣೆಯಲ್ಲಿ ಗಂಡನನ್ನು ಹುಡುಕಿಕೊಡಿ ಎಂದು ದೂರು ನೀಡದ್ದಾರೆ.