ಮಾಸ್ಕೋ : 14 ವರ್ಷದ ಮಗಳು ತಾಯಿಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ರಷ್ಯಾದಲ್ಲಿ ನಡೆದಿದೆ.
ಕೊಲೆಯಾದ ತಾಯಿಯು ಬಾಯ್ಫ್ರೆಂಡ್ (Boyfriend)ನನ್ನು ಬಿಡು ಎಂದು ಬುದ್ಧಿವಾದ ಹೇಳಿದ್ದಕ್ಕೆ ಕೊಲೆ ಮಾಡಿದ್ದಾಳೆ ಎನ್ನಲಾಗಿದ್ದು, ಆರೋಪಕ್ಕೆ ಸಂಬಂಧಿಸಿದಂತೆ ಸದ್ಯ ಅಪ್ರಾಪ್ತೆಯನ್ನು ರಷ್ಯಾ ಪೊಲೀಸರು (Russia Police) ತಿ ಬಂಧಿಸಿದ್ದಾರೆ.
ತಾಯಿಯನ್ನು ಕತ್ತು ಹಿಸುಕಿ ಕೊಲೆಗೈದ ನಂತರ ಶವವನ್ನು ಪ್ಲಾಸ್ಟಿಕ್ನಿಂದ ಸುತ್ತಿ ರಷ್ಯಾದ ಮಾಸ್ಕೋ ಹತ್ತಿರ ಎಸೆಯಲಾಗಿದೆ ಎನ್ನಲಾಗಿದೆ. 15 ವರ್ಷದ ಹುಡುಗನ ಜೊತೆ ತನ್ನ ತಾಯಿಯನ್ನು ಕೊಲೆ ಮಾಡಲು ಸೂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ.
38 ವರ್ಷದ ತಾಯಿಯನ್ನು ಕೊಲ್ಲಲು ಹುಡುಗಿ ಆಕೆಯ ಬಾಯ್ಫ್ರೆಂಡ್ ಸೇರಿ ಇಬ್ಬರು ಹದಿಹರೆಯದವರಿಗೆ 3,72,202 ರೂ. ನೀಡಿದ್ದಾರೆ ಎಂದು ರಷ್ಯಾದ ಪೊಲೀಸರು ಶಂಕಿಸಿದ್ದಾರೆ.
ಮಗಳ ಮೇಲೆ ಪ್ರೀತಿ ಪ್ರಭಾವ ಬೀರುತ್ತಿರುವ ಹಿನ್ನೆಲೆಯಲ್ಲಿ ತಾಯಿ ಆತನನ್ನು ಬಿಡುವಂತೆ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಹುಡುಗಿ ತನ್ನ ಬಾಯ್ಫ್ರೆಂಡ್ ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.








