Bangalore | ಮಗುವನ್ನು ರಸ್ತೆ ಬದಿ ಎಸೆದ ತಾಯಿ!
1 min read
A MOTHER WHO THREW GIRL BABY INTO THE ROAD Bangalore saaksha tv
ಮಗುವನ್ನು ರಸ್ತೆ ಬದಿ ಎಸೆದ ತಾಯಿ!
ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಘಟನೆ
ರಕ್ತಸಿಕ್ತ ಹಸುಗೂಸನ್ನು ರಕ್ಷಿಸಿದ ಸ್ಥಳೀಯರು
ವೀವರ್ಸ್ ಕಾಲನಿಯವರಿಂದ ಮಗು ರಕ್ಷಣೆ
ಕೋಣನಕುಂಟೆ ಪೊಲೀಸರ ವಶಕ್ಕೆ ಹಸುಗೂಸು
ಬೆಂಗಳೂರು : ನಗರದ ಬನ್ನೇರುಘಟ್ಟ ಮುಖ್ಯ ರಸ್ತೆಯ ವೀವರ್ಸ್ ಕಾಲನಿಯಲ್ಲಿ ಅಮಾನವೀಯ ಘಟನೆವೊಂದು ನಡೆದಿದೆ.
ಹೆರಿಗೆಯಾದ ಕೆಲವೇ ಹೊತ್ತಿನಲ್ಲಿ ನವಜಾತ ಶಿಶುವನ್ನು ರಸ್ತೆ ಬದಿ ಬಟ್ಟೆಯಲ್ಲಿ ಸುತ್ತಿ ಎಸೆಯಲಾಗಿದೆ.
ರಕ್ತಸಿಕ್ತವಾಗಿದ್ದ ಮಗುವಿನ ಚೀರಾಟ ಕೇಳಿಸಿಕೊಂಡ ಸ್ಥಳೀಯರು ಹಸುಗೂಸನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಶನಿವಾರ ಮುಂಜಾನೆ ಸ್ಥಳೀಯರು ರಸ್ತೆ ಬದಿಯಲ್ಲಿ ಮಗು ಅಳುತ್ತಿರುವುದನ್ನ ಕೇಳಿಸಿಕೊಂಡಿದ್ದಾರೆ.

ಸ್ಥಳಕ್ಕೆ ಬಮದು ನೋಡಿದಾಗ ಮಗು ಪತ್ತೆಯಾಗಿದೆ. ಬಳಿಕ ಚೂಡರತ್ನ ಎಂಬುವರು ತಕ್ಷಣ ಮಗುವನ್ನು ಮನೆಯೊಳಗೆ ಕರೆದುಕೊಂಡು ಹೋಗಿ, ಸ್ನಾನ ಮಾಡಿಸಿದ್ದಾರೆ.
ಅಲ್ಲದೇ ಕೋಣನ ಕುಂಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕೋಣನಕುಂಟೆ ಪೊಲೀಸರು ಶಿಶುವನ್ನು ವಶಕ್ಕೆ ಪಡೆದ್ದಾರೆ.
ರಕ್ಷಣೆ ಮಾಡಲಾಗಿರುವ ಮಗು ಹೆಣ್ಣು ಶಿಶುವಾಗಿದ್ದು, ಅನೈತಿಕ ಸಂಬಂಧಕ್ಕೆ ಅಥವಾ ಅಪ್ರಾಪ್ತೆಗೆ ಜನಿಸಿದ ಮಗುವಾಗಿದ್ದರಿಂದ ತಾಯಿ ಬಿಟ್ಟು ಹೋಗಿರಬೇಕೆಂಬ ಅನುಮಾನ ಮೂಡಿದೆ.
A MOTHER WHO THREW GIRL BABY INTO THE ROAD Bangalore