ಟೆಲ್ ಅವೀವ್: ಇಸ್ರೇಲ್, ಹಮಾಸ್ ಉಗ್ರರ ಮೇಲೆ ಮುಗಿ ಬಿದ್ದಿದೆ. ಹೀಗಾಗಿ ಪ್ಯಾಲೆಸ್ಟೀನಿಯನ್ ಜನರು ಸಂಕಷ್ಟದಲ್ಲಿದ್ದಾರೆ. ಇದರ ಮಧ್ಯೆ ಯುದ್ಧಪೀಡಿತ ಪ್ಯಾಲೆಸ್ಟೀನಿಯನ್ ಪ್ರದೇಶದ ಉತ್ತರದಲ್ಲಿರುವ ತನ್ನ ಮನೆಯಿಂದ 5 ಕಿಮೀ ದೂರದಲ್ಲಿನ ದಕ್ಷಿಣ ಗಾಜಾದ (Gaza) ಆಸ್ಪತ್ರೆಗೆ ನಡೆದುಕೊಂಡು ಹೋಗಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಇಮಾನ್ ಅಲ್-ಮಸ್ರಿ ಎಂಬ ಮಹಿಳೆಯೇ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಜಬಾಲಿಯಾ ನಿರಾಶ್ರಿತರ ಶಿಬಿರಕ್ಕೆ ಐದು ಕಿಲೋಮೀಟರ್ ದೂರ ನಡೆದು ಹೋಗಿದ್ದಾರೆ. ದಕ್ಷಿಣಕ್ಕೆ ದೇರ್ ಅಲ್-ಬಾಲಾಹ್‌ಗೆ ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಸಿಗಲಿಲ್ಲ. ಹೀಗಾಗಿ ನಡೆದುಕೊಂಡು ಹೋಗಿರುವುದಾಗಿ ಮಹಿಳೆ ಹೇಳಿದ್ದಾರೆ.
ಯುದ್ಧದಿಂದಾಗಿ ಬೇರೆ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸ್ಥಳಾವಕಾಶ ಕಲ್ಪಿಸಲು, ಮಹಿಳೆಯು ನವಜಾತ ಶಿಶುಗಳೊಂದಿಗೆ ಆಸ್ಪತ್ರೆ ತೊರೆದಿದ್ದಾರೆ. ಸದ್ಯ ಇಮಾನ್ ಅವರು ಡೀರ್ ಅಲ್-ಬಾಲಾಹ್‌ನಲ್ಲಿ ಇಕ್ಕಟ್ಟಾದ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ. ನಾಲ್ಕು ಮಕ್ಕಳಲ್ಲಿ ಮೂರು ಮಗು ಆರೋಗ್ಯವಾಗಿದ್ದು, ಓರ್ವ ಮಗು ಕಡಿಮೆ ತೂಕ ಹೊಂದಿದೆ ಎನ್ನಲಾಗಿದೆ.