ಮುಂಬರುವ ಏಷ್ಯಾಕಪ್ನ ಹೈಬ್ರಿಡ್ ಮಾಡೆಲ್ ಅನ್ನು ತಿರಸ್ಕರಿಸಿರುವುದಾಗಿ ಪಾಕ್ ಕ್ರಿಕೆಟ್ ಮಂಡಳಿಯ ನೂತನ ಮುಖ್ಯಸ್ಥ ಜಾಕ ಅಶ್ರಫ್ ತಿಳಿಸಿದ್ದಾರೆ.
ಮಂಡಳಿಯ ಪೂರ್ವಾಕಾರಿ ನಜಾಂ ಸೇಥಿ ಅವರ ಹೈಬ್ರಿಡ್ ಮಾಡೆಲ್ ಅನ್ನು ತಿರಸ್ಕರಿಸಿದ್ದಾರೆ. ಕರಾಚಿಯಲ್ಲಿ ಮಾತನಾಡಿದ ಜಾಕ ಅಶ್ರï, ಏಷ್ಯಾಕಪ್ಗೆ ಅಳವಡಿಸಿರುವ ಹೈಬ್ರಿಡ್ ಮಾಡೆಲ್ ಅನ್ನು ತಿರಸ್ಕರಿಸಿದ್ದೇನೆ. ನಾನು ಇದನ್ನು ಒಪ್ಪುವುದಿಲ್ಲ. ಏಷ್ಯಾ ಕ್ರಿಕೆಟ್ ಕೌನ್ಸಿಲ್ ಈ ಹೀಮದೆ ಪಾಕಿಸ್ತಾನದಲ್ಲಿ ನಡೆಸಲು ಉದ್ದೇಶಿಸಿತ್ತು. ಅಂದಮೇಲೆ ನಾವು ಆತಿಥ್ಯ ವಹಿಸಬೇಕಿತ್ತು ಎಂದು ಹೇಳಿದ್ದಾರೆ.
ಅಶ್ರಫ್ ಅವರ ಹೇಳಿಕೆ ಮುಂಬರುವ ಏಕದಿನ ವಿಶ್ವಕಪ್ನಲ್ಲೂ ಪಾಲ್ಗೊಳುವ ಬಗ್ಗೆ ಅನುಮಾನವಿದೆ ಎಂದು ಹೇಳಲಾಗುತ್ತಿದೆ. ಬಿಸಿಸಿಐ ಕೂಡ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಏಷ್ಯಾ ಕ್ರಿಕೆಟ್ ಕೌನ್ಸಿಲ್ ಮಂಡಳಿ ಹೈಬ್ರಿಡ್ ಮಾಡೆಲ್ ಅನ್ನು ಒಪ್ಪಿಕೊಂಡಿದೆ. ಅಶ್ರಫ್ ತಮ್ಮ ನಿಲುವನ್ನು ಬದಲಿಸದಿದ್ದರೆ ಪಾಕ್ ಕ್ರಿಕೆಟ್ ತಂಡವಿಲ್ಲದೇ ಟೂರ್ನಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಏಷ್ಯಾಕಪ್ ಮಾಡೆಲ್ ಅನ್ನು ಒಪ್ಪಿಕೊಳ್ಳಲಾಗಿದ್ದು ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿದು ಬಂದಿದೆ. ಅಶ್ರಫ್ ಅವರಿಗೆ ಮಾತನಾಡಲು ಸ್ವತಂತ್ರ್ಯವಿದೆ ಅವರು ಏನು ಬೇಕಾದರೂ ಮಾತನಾಡಬಹುದೆಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ನ ಸದಸ್ಯರೊಬ್ಬರು ತಿಳಿಸಿದ್ದಾರೆ.







