ಹಸಿದ ನಾಯಿ ಮರಿಗೆ ಹಂದಿಯೊಂದು ಹಾಲುಣಿಸಿದ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಹಸಿದು ಬಂದಿದ್ದ ನಾಯಿ ಮರಿಗೆ ಹಂದಿ ತನ್ನ ಎದೆ ಹಾಲುಣಿಸಿದೆ. ಈ ದೃಶ್ಯ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಎಮ್ಮಿಗನೂರಿನ ಮುನೆಪ್ಪ ನಗರದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೀದಿಯೊಂದರ ಪಕ್ಕದಲ್ಲಿ ಹಂದಿ ಮಲಗಿದೆ. ಅಲ್ಲಿಗೆ ಬಂದ ಪುಟ್ಟ ಶ್ವಾನದ ಮರಿಯೊಂದು ಹೊಟ್ಟೆ ಹಸಿವನ್ನು ತಾಳಲಾರದೆ ಹಂದಿಯ ಎದೆ ಹಾಲು ಕುಡಿದಿದೆ.
ಈ ಸಂದರ್ಭದಲ್ಲಿ ಹಂದಿ ನಾಯಿ ಮರಿಯ ಮೇಲೆ ದಾಳಿ ಮಾಡದೆ ಅಥವಾ ಎಗರಾಡದೆ ಹಾಲು ನೀಡಿ ಮಾತೃ ವಾತ್ಸಲ್ಯ ಮೆರೆದಿದೆ.