ಬೆಂಗಳೂರು : ಗರ್ಭಿಣಿ ಮಹಿಳೆಯೊಬ್ಬರು ತನ್ನ 5 ವರ್ಷದ ಮಗು ಬಿಟ್ಟು ನಾಪತ್ತೆಯಾಗಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.
ಶಾಲಿನಿ ಎಂಬ ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯೇ ನಾಪತ್ತೆಯಾಗಿರುವವರು. ಶಾಲಿನಿ ಹಾಗೂ ಸ್ವಾಮಿ ದಂಪತಿ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮತ್ ಲೇ ಔಟ್ ನಲ್ಲಿ ಇದ್ದರು. ಎಂದಿನಂತೆ ಶಾಲಿನಿ ಬೆಳಿಗ್ಗೆ 6 ಗಂಟೆಯ ವೇಳೆಗೆ ಹಾಲು ತರಲು ಹೋದವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಶಾಲಿನಿ ಎಂದಿನಂತೆ ಬೆಳಗ್ಗೆ 6ಕ್ಕೆ ಹೋದವರು 8 ಗಂಟೆಯಾದರೂ ಪತ್ನಿ ಶಾಲಿನಿ ಮನೆಗೆ ಬಾರದಿದ್ದಾಗ ಪತಿ ಗಾಬರಿಯಾದರು. ಬಳಿಕ ಯಾಕೆ ಪತ್ನಿ ಇನ್ನೂ ಮನೆಗೆ ಬಂದಿಲ್ಲ ಎಂದು ಹುಡುಕಾಟ ನಡೆಸಲು ಆರಂಭಿಸಿದರು. ಆಗ ಪತ್ನಿ ಬಿಎಂಟಿಸಿ ಬಸ್ ಹತ್ತಿ ತೆರಳುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಬೆಳಿಗ್ಗೆಯಿಂದಲೇ ಮೆಜೆಸ್ಟಿಕ್ ಸೇರಿದಂತೆ ಎಲ್ಲ ಬಸ್ ನಿಲ್ದಾಣಗಳಲ್ಲಿ ಹುಡುಕಾಟ ನಡೆಸಿದರೂ ಮಹಿಳೆ ಪತ್ತೆಯಾಗಿಲ್ಲ. ಆದರೆ, ಮಗು ಬಿಟ್ಟು ಶಾಲಿನಿ ಎಲ್ಲಿ ಹೋಗಿದ್ದು ಏಕೆ ಹೋಗಿದ್ದಾರೆ ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಈ ಕುರಿತು ಪತಿ ಸ್ವಾಮಿ ತಾವರೆಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.








