ರೈಲು ಹಳಿ ದಾಟುವಾಗ ಕೂದಲಳೆ ಅಂತರದಿಂದ ಪಾರಾದ ಸವಾರ Saaksha Tv
ಮುಂಬೈ: ರೈಲು ಹಳಿ ದಾಟುವಾಗ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಬೈಕ್ ಸವಾರ ಪಾರಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಬೈಕ್ ಸವಾರನೊಬ್ಬ ಮುಂಬೈ ನಗರದಲ್ಲಿ ರೈಲು ಹಳಿ ದಾಟಲು ಮುಂದಾಗಿದ್ದಾನೆ. ಆಗ ಕೆಲವೇ ಸೆಕೆಂಡ್ಗಳಲ್ಲಿ ಬಂದ ರೈಲು ವೇಗವಾಗಿ ಬಂದಿದೆ. ಇದನ್ನು ಕಂಡ ಸವಾರ ಬೈಕನ್ನು ಹಳಿಯ ಮೇಲೆ ಬಿಟ್ಟು ಪಕ್ಕಕ್ಕೆ ಹಾರಿದ್ದಾನೆ. ವೇಗವಾಗಿ ಬಂದ ರೈಲಿಗೆ ಬೈಕ್ ಸಿಕ್ಕು ಚಿದ್ರಗೊಂಡಿದ್ದು, ಸವಾರ ಕೂದಲಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಲು ಬಹಳಷ್ಟು ಭಯಾನಕವಾಗಿದೆ.
ಇದೇ ರೀತಿ ಇನ್ನೊಂದು ವೀಡಿಯೋದಲ್ಲಿ ಬೈಕ್ ಸವಾರ ರೈಲ್ವೇ ಹಳಿ ದಾಟಲು ಯತ್ನಿಸಿದ್ದಾನೆ. ಆದರೆ ಅದಕ್ಕೂ ಮುನ್ನವೇ ರೈಲು ಬಂದಿದೆ ಗಾಬರಿಯಿಂದ ಯುವಕ ಬೈಕ್ ನ್ನು ಹಳಿಯ ಬಳಿಯೇ ಬಿಟ್ಟಿದ್ದಾನೆ. ಆಗ ಬಿದ್ದ ಬೈಕ್ ರೈಲಿನ ಅಡಿ ಸಿಕ್ಕಿಹಾಕಿಕೊಂಡಿದ್ದು,ಬೈಕ್ ಚಿದ್ರಗೊಂಡಿದೆ. ಈ ಎರಡು ಘಟನೆಗಳು ಫೆಬ್ರವರಿ 12ರಂದು ನಡೆದಿದೆ ಎಂದು ಹೇಳಲಾಗುತ್ತಿದೆ









