ಬಹುಭಾಷಾ ನಟಿ ಆಸಿನ್ ಅವರು ಈಗ ಕುಟುಂಬದ ವಿಷಯದಲ್ಲಿ ಸುದ್ದಿಯಾಗಿದ್ದಾರೆ. ಗಜನಿ, ಲಂಡನ್ ಡ್ರೀಮ್ಸ್, ರೆಡಿ, ಹೌಸ್‌ಫುಲ್ 2 (Housefull 2) ಸೇರಿದಂತೆ ಸಾಕಷ್ಟು ಅವರು ನಟಿಸಿದ್ದರು. ಆ ನಂತರ ರಾಹುಲ್ ಶರ್ಮಾಗೆ(Rahul Sharma) ಜೊತೆ ವಿವಾಹವಾಗಿದ್ದರು. ಸದ್ಯ ಆಸಿನ್ (Asin) ಡಿವೋರ್ಸ್ (Divorce) ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಬಹುಭಾಷಾ ನಟಿ ಆಸಿನ್ ಅವರು ಕೆಲವು ವರ್ಷಗಳಿಂದ ಸಿನಿಮಾ ರಂಗದಿಂದ ದೂರವಿದ್ದಾರೆ. ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. 2015ರಲ್ಲಿ ‘ಆಲ್ ಈಸ್ ವೆಲ್’ ಎಂಬ ಚಿತ್ರದಲ್ಲಿ ಆಸಿನ್ ನಟಿಸಿದ್ದರು. ವೈವಾಹಿಕ ಬದುಕಿನ ವಿಚಾರವಾಗಿ ನಟಿ ಆಸಿನ್ ಸದ್ದು ಮಾಡ್ತಿದ್ದಾರೆ. ಆಸಿನ್ ಅವರು ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎನ್ನುವ ಸುದ್ದಿ ವೈರಲ್ ಆಗಿದ್ದು ಸದ್ಯದಲ್ಲಿಯೇ ಪತಿ ರಾಹುಲ್ ಶರ್ಮಾ ಅವರಿಂದ ವಿಚ್ಛೇದನ ಪಡೆದು ದೂರ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಮಲಯಾಳಿ ಮೂಲದ ಈ ನಟಿ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದರು. ಸಿನಿ ಜೀವನ ಉತ್ತುಂಗದಲ್ಲಿರುವಾಗಲೇ ಆಸಿನ್, ಮೈಕ್ರೋಮ್ಯಾಕ್ಸ್ ಸಿಇಓ ರಾಹುಲ್ ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆಸಿನ್ ಎನ್ನುವುದಕ್ಕಿಂತ ಗಜನಿ(Ghajini) ನಟಿ ಎಂದರೆ ಎಲ್ಲರಿಗೂ ನೆನಪಾಗುತ್ತದೆ. 2015ರಲ್ಲಿ ರಿಲೀಸ್ ಆಗಿದ್ದ ‘ಗಜನಿ’ ಚಿತ್ರದ ಆಮೀರ್ ಖಾನ್‌ಗೆ ಅಸಿನ್ ನಾಯಕಿಯಾಗಿದ್ದರು. ನಟ ಸೂರ್ಯ ಜೊತೆ ಕಾಣಿಸಿಕೊಂಡಿದ್ದ ಆಸಿನ್ ಅಭಿಮಾನಿಗಳ ಹೃದಯ ಗೆದ್ದಿದ್ದರು. ಆಸಿನ್- ರಾಹುಲ್ ಇಬ್ಬರ ದಾಂಪತ್ಯ ಬದುಕು ಡಿವೋರ್ಸ್ ಹಂತಕ್ಕೆ ಬಂದಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆಸಿನ್- ರಾಹುಲ್ ನಡುವೆ ಯಾವುದು ಸರಿ ಇಲ್ಲ ಇಬ್ಬರೂ ದೂರ ಆಗಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.






