ಅಹಮದಾಬಾದ್: ಇಂದು ಭಾರತ ಹಾಗೂ ಆಸ್ಟ್ರೇಲಿಯಾ ಮದ್ಯೆ ಫೈನಲ್ ಪಂದ್ಯ ನಡೆಯುತ್ತಿದ್ದು, ಸ್ಟೇಡಿಯಂನತ್ತ ಜನ ಸಾಗರ ಹರಿದು ಬಂದಿದೆ.
ಅಹಮದಾಬಾದ್‌ನ (Ahmedabad) ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ಒಳಗೆ ಹಾಗೂ ಹೊರಗೆ ಜನವೋ ಜನ ಎನ್ನುವಂತಾಗಿದೆ. ಸ್ಟೇಡಿಯಂನ ಹೊರಗೂ ಕೂಡ ಜನರು ಕಿಕ್ಕಿರಿದ್ದು ತುಂಬಿದ್ದು, ಹೊರಗೂ ಕೂಡ ಭಾರತೀಯ ಆಟಗಾರರಿಗೆ ಬೆಂಬಲ ವ್ಯಕ್ತಪಡಿಸುವ ನಿಟ್ಟಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದಾರೆ. ಭಾರತ ಪರ ಜಯಘೋಷ ಮೊಳಗಿಸುತ್ತಾ, ಟೀಂ ಇಂಡಿಯಾ ಗೆದ್ದು ಬರಲಿ ಎಂದು ಶುಭ ಕೋರುತ್ತಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ಸುಧೀರ್ ಕುಮಾರ್ ಚೌಧರಿ, ಭಾರತ ತಂಡ 2011ರ ಗೆಲುವನ್ನು ಪುನರಾವರ್ತಿಸುತ್ತದೆ. ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಶತಕ ಗಳಿಸಿ 450 ರನ್‌ಗಳ ಗುರಿ ನೀಡಿ ಸುಲಭವಾಗಿ ಗೆಲ್ಲುವಂತೆ ಮಾಡಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ.
ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದ ನರೇಂದ್ರ ಮೋದಿ ಸ್ಟೇಡಿಯಂ ಈಗ ವಿಶ್ವ ದಾಖಲೆ ಬರೆಯಲು ಸಜ್ಜಾಗಿದೆ. 1,320,000 ಜನರು ಪಂದ್ಯವನ್ನು ನೋಡಲು ಬರಲಿದ್ದಾರೆ. ಬಹಳಷ್ಟು ಗಣ್ಯರು ಪಂದ್ಯಕ್ಕೆ ಹಾಜರಾಗಲು ಸಜ್ಜಾಗಿದ್ದಾರೆ.