ಬೈರೂತ್: ಲೆಬನಾನ್ ನಲ್ಲಿ ಏಕಕಾಲದಲ್ಲಿ ವಾಕಿಟಾಕಿಗಳು ಸ್ಫೋಟವಾಗಿವೆ.
ಪೇಜರ್‌ಗಳು ಸ್ಫೋಟಗೊಂಡ (Pager Explosions) ಬೆನ್ನಲ್ಲೇ ಲೆಬನಾನ್ ನಲ್ಲಿ (Lebanon) ವಾಕಿಟಾಕಿಗಳು (Walkie Talkie) ಸ್ಫೋಟಗೊಂಡಿವೆ.
ಲೆಬನಾನ್ ನಲ್ಲಿನ ಸಶಸ್ತ್ರ ಗುಂಪು ಹಿಜ್ಬುಲ್ಲಾ ಸದಸ್ಯರು ಸಂವಹನಕ್ಕೆ ಬಳಸುತ್ತಿದ್ದ ಸಾಧನಗಳು ಏಕಾಏಕಿಯಾಗಿ ಸ್ಫೋಟಗೊಂಡಿವೆ ಎಂದು ವರದಿಯಾಗಿದೆ.
ವಾಕಿ-ಟಾಕಿಗಳನ್ನು ಹಿಜ್ಬುಲ್ಲಾ ಸದಸ್ಯರು ಮತ್ತು ಅವರ ಸಹಚರರು ಬಳಸುತ್ತಿದ್ದರು. 4 ಸಾವಿರಕ್ಕೂ ಅಧಿಕ ಪೇಜರ್ ಗಳು ಇದ್ದಕ್ಕಿದ್ದಂತೆ ಸ್ಪೋಟಗೊಂಡ 24 ಗಂಟೆಗಳ ನಂತರ ಮತ್ತೊಂದು ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.