ವಾಷಿಂಗ್ಟನ್: ಸೈನಿಕನೊಬ್ಬ ಫ್ರೀ ಪ್ಯಾಲೆಸ್ತೀನ್ ಎನ್ನುತ್ತ ಇಸ್ರೇಲಿ ರಾಯಭಾರ ಕಚೇರಿ ಎದುರು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ವಿರುದ್ಧ ಪ್ರತಿಭಟನೆ ನಡೆಸಿದ ಸೈನಿಕನೊಬ್ಬ ಅಮೆರಿಕದ ವಾಷಿಂಗ್ಟನ್ ನಲ್ಲಿನ ಇಸ್ರೇಲಿ ರಾಯಭಾರ ಕಚೇರಿಯ ಹೊರಗೆ ಈ ರೀತಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘೋಷಣೆ ಕೂಗುತ್ತ ಯುಎಸ್ ಏರ್‌ಮ್ಯಾನ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಾಯುಪಡೆ ಹೇಳಿದೆ.
ಆಘಾತಕಾರಿ ಘಟನೆಯು ಗಾಜಾದಲ್ಲಿ ಇಸ್ರೇಲ್‌ನ ಕ್ರಮಗಳ ವಿರುದ್ಧ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಪ್ರತಿಭಟನೆ ನಡೆಯುವುದಕ್ಕೆ ಕಾರಣವಾಗಿದೆ. ಯುಎಸ್ ಬೆಂಬಲದೊಂದಿಗೆ ಹಮಾಸ್ ಉಗ್ರಗಾಮಿಗಳು ಅಕ್ಟೋಬರ್ 7 ರಂದು ನಡೆಸಿದ ದಾಳಿಗೆ ಪ್ರತೀಕಾರದ ಯುದ್ಧವನ್ನು ನಡೆಯುತ್ತಿದೆ. ಹೆಸರು ಹೇಳಲು ಇಚ್ಛಿಸದ ವ್ಯಕ್ತಿ ತನ್ನ ಮೇಲೆಯೇ ಬೆಂಕಿ ಹಚ್ಚಿಕೊಂಡು ಪ್ರೀ ಪ್ಯಾಲೆಸ್ತೀನ್ ಎನ್ನುತ್ತ ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಸ್ಥಳೀಯ ಸಿಬ್ಬಂದಿಗಳು ಹೇಳಿದ್ದಾರೆ. ಆದರೆ, ಘಟನೆಯಲ್ಲಿ ಯಾವುದೇ ಅಹಿತಕರ ನಡೆದಿಲ್ಲ.