ನವದೆಹಲಿ: ವಿದ್ಯಾರ್ಥಿ ಮೇಲೆ ಆತನ ಸ್ನೇಹಿತರೇ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಹಲ್ಲೆ ಮಾಡಿದ ನಂತರ ಓರ್ವ ಬಾಲಕ ಆತನ ಗುದದ್ವಾರಕ್ಕೆ ಮರದ ಕೋಲು ತುರುಕಿದ್ದಾನೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. 14 ವರ್ಷದ ಬಾಲಕ ಶಾಲೆಯಲ್ಲಿ ತನ್ನ ಸ್ನೇಹಿತರೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ಆಗ ಗಲಾಟೆ ತಾರಕಕ್ಕೇರಿದ್ದು, ನಾಲ್ವರು ಸ್ನೇಹಿತರು ಬಾಲಕನನ್ನು ಮೂಲೆಗೆ ತಳ್ಳಿ ಮನಬಂದಂತೆ ಥಳಿಸಿದ್ದಾರೆ. ನಾಲ್ವರಲ್ಲಿ ಓರ್ವ ಮರದ ತುಂಡಿನಿಂದ ಬಾಲಕನ ಗುದದ್ವಾರಕ್ಕೆ ಹಾನಿ ಮಾಡಿದ್ದಾನೆ. ಈ ಕುರಿತು ವಿದ್ಯಾರ್ಥಿಯ ಪೋಷಕರು, ಪೊಲೀಸರು ಹಾಗೂ ಶಾಲಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹಲ್ಲೆ ಮಾಡಿದ ನಂತರ ಯಾರಿಗೂ ಹೇಳದಂತೆ ಆತನ ಗೆಳೆಯರು ಬೆದರಿಕೆ ಹಾಕಿದ್ದಾರೆ. ವಿಚಾರವನ್ನು ಬಯಲು ಮಾಡಿದರೆ ಅದೇ ಶಾಲೆಯಲ್ಲಿ ಓದುತ್ತಿರುವ ತನ್ನ ಸಹೋದರಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬೆದರಿಸಿದ್ದಾರೆ ಎನ್ನಲಾಗಿದೆ.
ಭಯದಿಂದಾಗಿ ಮೊದಲು ವಿದ್ಯಾರ್ಥಿ ಯಾರ ಮುಂದೆಯೂ ಇದನ್ನು ಹೇಳಿಲ್ಲ. ಆದರೆ, ಆತನಿಗೆ ಹಲ್ಲೆ ನಡೆದ ಎರಡು ದಿನಗಳ ನಂತರ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವಿದ್ಯಾರ್ಥಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿಲ್ಲ. ನಂತರ ವೈದ್ಯರು ಯಾವುದೋ ಅಹಿತಕರ ಘಟನೆಗೆ ಮಗು ಬಲಿಯಾಗಿರಬಹುದು ಎಂದು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಆತನಿಗೆ ಆಪರೇಷನ್ ಕೂಡ ಮಾಡಲಾಗಿದೆ. ವಿದ್ಯಾರ್ಥಿಗೆ ಪ್ರಜ್ಞೆ ಬಂದಾಗ, ತನ್ನ ಕುಟುಂಬಕ್ಕೆ ನಡೆದ ಘಟನೆ ಹೇಳಿದ್ದಾನೆ. ನಂತರ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿದ್ಯಾರ್ಥಿಯ ಗುದದ್ವಾರದಲ್ಲಿ ಮರದ ಕೋಲನ್ನು ತೂರಿಸಲು ಪ್ರಯತ್ನಿಸಿದ್ದರಿಂದ ಅಲ್ಲಿ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ.