ಶಾಲೆಯಲ್ಲಿ ಅವಮಾನವಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
ಬೆಂಗಳೂರು: ಶಾಲೆಯಲ್ಲಿ ಅವಮಾನವಾಗಿದ್ದಕ್ಕೆ ಬ್ಬ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವಿಜಯನವಿದ್ಯಾರ್ಥಿಯೊಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಧೀರಜ್ (14) ದುರ್ದೈವಿ. ರಾಜರಾಜೇಶ್ವರಿ ನಗರ ಸಮೀಪದ ಸ್ವರ್ಗರಾಣಿ ಸ್ಕೂಲ್ ಅಂಡ್ ಪಿಯು ಕಾಲೇಜಿನಲ್ಲಿ 8ನೇ ತರಗತಿ ಓದುತ್ತಿದ್ದ ಎಂದು ತಿಳಿದು ಬಂದಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಬುಧವಾರ ಧೀರಜ್ಗೆ ಪರೀಕ್ಷೆಯಿತ್ತು. ಪರೀಕ್ಷೆ ವೇಳೆ ಕಾಪಿ ಹೊಡೆಯುತ್ತಿದ್ದನಂತೆ. ಇದನ್ನು ಗಮನಿಸಿದ ಶಿಕ್ಷಕರು ಆತನಿಗೆ ಬೈದು ಪೋಷಕರಿಗೆ ಮಾಹಿತಿ ನೀಡಿದ್ದರಂತೆ. ಬಳಿಕ ಕಾಲೇಜು ಪ್ರಾಂಶುಪಾಲರು ಕ್ಷಮಾಪಣಾ ಪತ್ರ ಬರೆಸಿಕೊಂಡಿದ್ದರು. ಇದರಿಂದ ಮನನೊಂದ ಧೀರಜ್ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಈ ಘಟನೆ ಕುರಿತು ಸದ್ಯ ವಿಜಯನಗರನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.