ಮಲೇಷ್ಯಾ: ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನ ಬ್ರೇಕ್ ಹ್ಯಾಂಡಲ್ ಯುವಕನ ಕಣ್ಣಿನೊಳಗೆ ನುಗ್ಗಿರುವ ಘಟನೆ ನಡೆದಿದೆ.
ಈ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಕೂಡಲೇ 19 ವರ್ಷದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸಮಯ ಪ್ರಜ್ಞೆಯಿಂದ ಹ್ಯಾಂಡಲ್ ಹೊರ ತೆಗೆದಿದ್ದಾರೆ. ಆದೆ, ಅದೃಷ್ಟವಶಾತ್ ಯುವಕ, ಯಾವುದೇ ದೃಷ್ಟಿ ದೋಷ ಸಮಸ್ಯೆಯಿಲ್ಲದೇ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ವೈದ್ಯರು ಸಿಟಿ ಸ್ಕ್ಯಾನ್ ಮಾಡಿದಾಗ ಕಣ್ಣಿನ ಗುಡ್ಡೆಗಿಂತ ಕೆಲವೇ ಕೆಲವು ಮಿಲಿ ಮೀಟರ್ ಅಂತದಲ್ಲಿ ಬ್ರೇಕ್ ಹ್ಯಾಂಡಲ್ ಸಿಲುಕಿರುವುದು ಕಂಡು ಬಂದಿದೆ. ಸದ್ಯ ಕಣ್ಣಿನ ಗುಡ್ಡೆಗೆ ಯಾವುದೇ ಹಾನಿಯಾಗಿಲ್ಲ. ಕಣ್ಣುಗುಡ್ಡೆಯ ಕೆಳಗೆ ಭಾಗ ಹಾಗೂ ಮೂಗಿನ ಸುತ್ತಲಿನ ಮೂಳೆಗೆ ಹಾನಿಯಾಗಿದ್ದು, ಮೂಗಿನ ಸುತ್ತಲಿನ ಹಾನಿಗೊಳಗಾದ ಮೂಳೆಯನ್ನು ಎರಡು ಸ್ಕ್ರೂಗಳಿಂದ ಸರಿಪಡಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.