ಮಡಿಕೇರಿ: ಇತ್ತೀಚೆಗಷ್ಟೇ ಬಾಗಲಕೋಟೆಯಲ್ಲಿ ಭೀಕರ ಅಪಘಾತವೊಂದು ನಡೆದಿತ್ತು. ಕಾರು (Car) ಹಾಗೂ ಲಾರಿ (Lorry) ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಈ ಪೈಕಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ರಂಜನ್ (35) ಸಾವನ್ನಪ್ಪಿದ ವ್ಯಕ್ತಿ ಎನ್ನಲಾಗಿದೆ. ಕುಶಾಲನಗರ (Kuashalnagar) ತಾಲೂಕಿನ ಸುಂಟಿಕೊಪ್ಪ ಹತ್ತಿರದ ಗರಗಂದೂರು ಗ್ರಾಮದ ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿ ಹಾಗೂ ಕುರುಂಬ ಭಗವತಿ ಕೊಡಂಗಲೂರಮ್ಮ ದೇವಸ್ಥಾನದ ಮುಖ್ಯಸ್ಥ ರಾಜಣ್ಣ ಅವರ ಪುತ್ರ ರಂಜನ್ ಅಮೇಜಾನ್ ಕಂಪನಿಯ ಉದ್ಯೋಗಿಯಾಗಿದ್ದರು. ಅವರು ಇತ್ತೀಚೆಗಷ್ಟೇ ಬಡ್ತಿ ಪಡೆದಿದ್ದರು. ಬಾಗಲಕಟೆಯಿಂದ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅವರಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿತ್ತು. ಈ ಪೈಕಿ ರಂಜನ್ ಹಾಗೂ ಮತ್ತಿಬ್ಬರು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ರಂಜನ್, ಪತ್ನಿ ಹಾಗೂ 8 ತಿಂಗಳ ಅವಳಿ-ಜವಳಿ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ.