ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಸಾಗಿಸಿರುವ ಘಟನೆ ಮಧ್ಯಪ್ರದೇಶದ ಜಬಲ್ ಪುರದಲ್ಲಿ ಬೆಳಕಿಗೆ ಬಂದಿದೆ..
ಸುನೀಲ್ ಧುರ್ವೆ ಹಾಗೂ ಜಮಾನಿ ಮಾರಾವಿ ದಂಪತಿಗಳು ದಿಂಡೋರಿ ಜಿಲ್ಲೆಯ ಸಹಜ್ಪುರಿಯಲ್ಲಿ ಜೀವನ ಸಾಗಿಸುತ್ತಿದ್ದರು. ಜಮಾನಿಯು ಇತ್ತೀಚೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಆದರೆ, ಈ ಮಗು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಜೂ.14 ರಂದು ಜಬಲ್ ಪುರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಶುಕ್ರವಾರದಂದು ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿದೆ.
ಮಗುವನ್ನು ತಮ್ಮ ಊರಿಗೆ ಕೊಂಡೊಯ್ಯಲು ಸುನೀಲ್, ಆಸ್ಪತ್ರೆಯ ಸಿಬ್ಬಂದಿಗೆ ಶವ ಸಾಗಿಸುವ ವಾಹನವನ್ನು ನೀಡುವಂತೆ ಮನವಿ ಮಾಡಿದಾಗ ಅವರು ತಿರಸ್ಕರಿಸಿದ್ದಾರೆ. ಮೃತದೇಹವನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ಖಾಸಗಿ ವಾಹನದವರು ಸುಮಾರು 5 ಸಾವಿರದಷ್ಟು ಹಣ ಕೇಳಿದ್ದಾರೆ. ಇಷ್ಟು ಹಣ ಕೊಡಲು ಆತನ ಬಳಿ ಹಣ ಇಲ್ಲ. ಹೀಗಾಗಿ ಚೀಲದಲ್ಲಿ ಮೃತ ದೇಹವನ್ನು ಹಾಕಿಕೊಂಡಿದ್ದಾರೆ. ಬಸ್ ಇಲ್ಲದ ಕಾರಣ ಅವರು ಬಸ್ ನಲ್ಲಿ ಕಾಯುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.







