ಮುಂಬೈ, ಮೇ 15 : ಮಹಾರಾಷ್ಟ್ರದ ಗ್ರಾಮವೊಂದಕ್ಕೆ ಹೀರೋ ಚಿ ವಾಡಿ ಎಂದ ಹೆಸರಿಡುವ ಮೂಲಕ ಇರ್ಫಾನ್ ಖಾನ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಗ್ರಾಮಸ್ಥರು ತಮ್ಮ ಗ್ರಾಮವೊಂದಕ್ಕೆ ಹೀರೋ ಚಿ ವಾಡಿ ಎಂದ ಹೆಸರಿಡುವ ಮೂಲಕ ಇರ್ಫಾನ್ ಖಾನ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಇರ್ಫಾನ್ ಖಾನ್ ಬದುಕಿದ್ದಾಗ ಸಾಕಷ್ಟು ಜನರಿಗೆ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಹಳ್ಳಿಗರ, ಬಡ ಜನರ ಕಷ್ಟಕ್ಕೆ ನೆರವಾಗಿದ್ದಾರೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್ಪುರಿ ಸಮೀಪದ ಪ್ರತಿಯಚಾ ವಾಡಾ ಗ್ರಾಮಸ್ಥರು ಇರ್ಫಾನ್ ಖಾನ್ ಮಾಡಿರುವ ಸಹಾಯಕ್ಕೆ ಪ್ರತಿಯಾಗಿ ತಮ್ಮ ಗ್ರಾಮಕ್ಕೆ ಹೀರೋ ಚಿ ವಾಡಿ ಎಂದು ಹೆಸರು ಬದಲಾಯಿಸಿದ್ದಾರೆ. ಹೀರೋ ಚಿ ವಾಡಿ ಎಂದರೆ ಮರಾಠಿಯಲ್ಲಿ ಹೀರೋನ ನೆರೆಹೊರೆಯವರು ಎಂದರ್ಥ.
ಇಗತ್ಪುರು ತಾಲೂಕಿನ ತ್ರಿಲಂಗವಾಡಿ ಕೋಟೆಯ ಸಮೀಪ ಇರ್ಫಾನ್ ಖಾನ್ ಅವರ ಫಾರ್ಮ್ ಹೌಸ್ ಇದೆ. ಆ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುವುದನ್ನು ನೋಡಿದ ಇರ್ಫಾನ್ ಖಾನ್ ಅಲ್ಲಿನ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದರು. ತುರ್ತು ಸಂದರ್ಭದಲ್ಲಿ ಬಳಸಲೆಂದು ಆಂಬುಲೆನ್ಸ್, ಮಕ್ಕಳಿಗೆ ಕಂಪ್ಯೂಟರ್, ಪುಸ್ತಕ, ರೈನ್ ಕೋಟ್ ಹಾಗೂ ಸ್ಟೆಟರ್ ಮುಂತಾದವುಗಳನ್ನು ಪ್ರತಿಯಚಾ ವಾಡ ಗ್ರಾಮಕ್ಕೆ ನೀಡಿದ್ದರು. ತಮಗೆ ಮಾಡಿರುವ ಸಹಾಯ ಹಾಗೂ ಅವರ ಮೇಲಿರುವ ಪ್ರೀತಿಯಿಂದ ಗ್ರಾಮಸ್ಥರು ತಮ್ಮ ಗ್ರಾಮದ ಹೆಸರನ್ನು ಹೀರೋ ಚಿ ವಾಡಿ` ಎಂದು ಬದಲಾಯಿಸಿಕೊಂಡಿದ್ದಾರೆ.
ಆಧುನಿಕ ಬಾಲಿವುಡ್ನ ಕಿಂಗ್ ಎಂದೇ ಕರೆಯಲ್ಪಡುತ್ತಿದ್ದ ನಟ ಇರ್ಫಾನ್ ಖಾನ್ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಏಪ್ರಿಲ್ 29ರಂದು ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದರು.
ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ
ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ನೀಡಿರುವ ಹೇಳಿಕೆ...








