ಬಳ್ಳಾರಿ: ರೊಟ್ಟಿ ತರಲು ಹೋಗಿದ್ದ ವಿವಾಹಿತ ವ್ಯಕ್ತಿಗೆ ವಿವಾಹಿತೆಯ ಮೇಲೆ ಪ್ರೀತಿ ಬೆಳೆದಿದ್ದು, ಇಬ್ಬರು ಓಡಿ ಹೋಗಿ, ನಂತರ ಮಹಿಳೆ ಪತಿ ಕಡೆಗೆ ಬಂದಿರುವ ಘಟನೆಯೊಂದು ನಡೆದಿದೆ.
ಮಹಾರಾಷ್ಟ್ರದ ಸಾಂಗ್ಲಿಯ ಜತ್ತ ತಾಲೂಕಿನ ಮುಚ್ಚಂಡಿ ಗ್ರಾಮದ ಸಿದ್ದಗೊಂಡ ಸೌದತ್ತಿ ಎಂಬಾತ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆದರೂ ರೊಟ್ಟಿ ತರಲು ಹೋಗಿದ್ದ ವೇಳೆ ಸುಜಾತಾ ಎಂಬ ಮಹಿಳೆಯೊಂದಿಗೆ ಸಲುಗೆ ಬೆಳೆಸಿದ್ದ. ಈ ಮಹಿಳೆಗೂ ಮದುವೆಯಾಗಿ ಒಂದು ಮಗುವಿದೆ.
ಹೀಗಾಗಿ ಸುಜಾತ ಹಾಗೂ ಸೌದತ್ತಿ ಓಡಿ ಹೋಗಿದ್ದರು. ಕಳೆದ 6 ತಿಂಗಳಿಂದ ಬಳ್ಳಾರಿಯಲ್ಲಿ ನೆಲೆಸಿದ್ದರು. ಸುಜಾತಾಳ ಪತಿ ಬರುವಂತೆ ಕೇಳಿಕೊಂಡರು ಪತ್ನಿ ಹೋಗಿರಲಿಲ್ಲ. ಆದರೆ, ಇತ್ತೀಚೆಗೆ ಸೌದತ್ತಿ ಜೊತೆಗಿದ್ದ ಸುಜಾತ ಸುತ್ತಾಡಿ, ವಿಮಾನದಲ್ಲಿಯೂ ಪ್ರಯಾಣಿಸಿ ಸಾಕಷ್ಟು ಹಣ ಖರ್ಚು ಮಾಡಿಸಿ, ಈಗ ಮರಳಿ ಪತಿ ಹತ್ತಿರ ಹೋಗಿದ್ದಾಳೆ. ಈಗ ಸೌದತ್ತಿಯು ಸುಜಾತ ಬೇಕೆಂದು ಪಟ್ಟು ಹಿಡಿದಿದ್ದಾನೆ.