ಬೆಂಗಳೂರು: ಕ್ಯಾಂಪಸ್ ಸೆಲೆಕ್ಷನ್ ಆಗಿಲ್ಲ ಎಂಬ ಕಾರಣಕ್ಕೆ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಮೈಕೋ ಲೇಔಟ್‌ನಲ್ಲಿರುವ (Mico Layout) ವೆಗಾಸಿಟಿ ಮಾಲ್ ನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಶುಕ್ರವಾರ ನಡೆದಿದೆ. ಸುಹಾಸ್ ಅಡಿಗ (21) ಸಾವನ್ನಪ್ಪಿದ ಯುವಕ. ಈತ ಬಿ.ಕಾಂ ಪದವಿಧರ ಎನ್ನಲಾಗಿದೆ.
ಮಧ್ಯಾಹ್ನ ವೆಗಾಸಿಟಿ ಮಾಲ್‌ಗೆ (Vega City Mall) ಪ್ರವೇಶಿಸಿ 4ನೇ ಮಹಡಿಗೆ ಹೋಗಿ ಜನರು ನೋಡನೋಡುತ್ತಿದ್ದಂತೆಯೇ ಹಾರಿದ್ದಾನೆ. ಪರಿಣಾಮ ಆತನ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೂರು ತಿಂಗಳ ಹಿಂದೆ ಕಾಲೇಜಿನಲ್ಲಿ ವಿವಿಧ ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್ ನಡೆಸಿದ್ದವು. ಸುಹಾಸ್‌ಗೆ ಕೆಲಸ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಪೋಷಕರು ಹೇಳಿದ್ದಾರೆ. ಈ ಕುರಿತು ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.