ಪ್ರಿಯತಮ(Lover) ಕೈ ಕೊಟ್ಟ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ನಡು ರಸ್ತೆಯಲ್ಲಿಯೇ ರಂಪಾಟ ನಡೆಸಿ, ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪ್ರೀತಿಯಿಂದ ವಂಚಿತಳಾದ (Love Failure) ಯುವತಿಯೊಬ್ಬಳು ರೊಚ್ಚಿಗೆದ್ದು ನಡುರಸ್ತೆಯಲ್ಲಿಯೇ ರಂಪ ರಾಮಾಯಣ ಮಾಡಿದ್ದಾಳೆ. ಯುವಕ ವಂಚಿಸಿದ್ದಕ್ಕೆ ಮಾನಸಿಕವಾಗಿ ನೊಂದಿದ್ದಾಳೆ. ಅಲ್ಲದೆ ಅದೇ ಫೀಲಿಂಗ್ನಿಂದ ತಲೆಕೆಟ್ಟು ನಡು ರಸ್ತೆಯಲ್ಲಿಯೇ ರಂಪಾಟ ಮಾಡಿದ್ದಾಳೆ.
ರಸ್ತೆ ತುಂಬಾ ಓಡಾಡುತ್ತಾ ಸಿಕ್ಕ ಸಿಕ್ಕ ಕಾರುಗಳ ಮೇಲೆ ಹತ್ತಿ, ದುರ್ವರ್ತನೆ ತೋರಿದ್ದಾಳೆ. ಬ್ಯಾರಿಕೇಡ್ ಗಳನ್ನು ಬೀಳಿಸಿದ್ದಾಳೆ. ನಡು ರಸ್ತೆಯಲ್ಲಿಯೇ ಬೇಕಾ ಬಿಟ್ಟಿಯಾಗಿ ವರ್ತಿಸಿ, ಕೆಲ ಕಾಲ ಆತಂಕ ಸೃಷ್ಠಿಸಿದ್ದಾಳೆ. ನಂತರ ಸ್ಥಳೀಯರು ಆಕೆಯನ್ನು ಹಿಡಿದು ರಸ್ತೆ ಬದಿಯಲ್ಲಿ ಕೂರಿಸಿ ಬುದ್ಧಿ ಹೇಳಿದ್ದಾರೆ.
लड़की को प्यार में मिला धोखा तो कर दिया बवाल, बीच सड़क पर घंटों मचाया उत्पात।
मामला ग्वालियर के फूल बाग चौराहे का बताया जा रहा है।#Viral #Trending #ViralVideo pic.twitter.com/yIts74BQMn— Vikash Kumar (@kmrvikash11) March 29, 2023
ವೀಡಿಯೋ ಗಮನಿಸಿದಾಗ ಯುವತಿ, ಸಂಪೂರ್ಣವಾಗಿ ಮಾನಸಿಕವಾಗಿ ನೊಂದಿದ್ದಾಳೆ. ಅಲ್ಲದೇ, ಗೊಂದಲದಲ್ಲಿದ್ದಾಳೆ. ಆದರೆ, ಈ ಘಟನೆ ಎಲ್ಲಿ ನಡೆದಿದೆ ಎಂಬುವುದರ ಕುರಿತು ಮಾಹಿತಿ ಇಲ್ಲ. ಯುವತಿಯ ವೀಡಿಯೋವನ್ನು ವಿಕಾಸ್ ಕುಮಾರ್ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.








