ಪುರುಷರಿಗೆ ಗಡ್ಡ-ಮೀಸೆ ಆಭೂಷಣ. ಚೆನ್ನಾಗಿ ಕಾಣಲಿ ಎಂಬ ಕಾರಣಕ್ಕೆ ಕ್ಷೌರದಂಗಡಿಗೆ ಹೋಗಿ ಟ್ರಿಮ್ ಮಾಡಿಸುತ್ತಾರೆ. ಆದರೆ, ವಿಚಿತ್ರ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಳು ಪುರುಷರ ಕ್ಷೌರದಂಗಡಿಯಲ್ಲಿ ಶೇವಿಂಗ್ ಮಾಡಿಸಲು ಹೋಗಿ ಸುದ್ದಿಯಾಗಿದ್ದಾಳೆ.
ಇದಕ್ಕೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು @HasnaZaruriHai ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಟ್ರೆಂಡ್ ಯಾವಾಗ ಶುರುವಾಯಿತು???” ಎಂದು ಶೀರ್ಷಿಕೆ ನೀಡಲಾಗಿದೆ.
ವಿಡಿಯೋದಲ್ಲಿ ಯುವತಿಯೊಬ್ಬಳು ಕ್ಷೌರದಂಗಡಿಯಲ್ಲಿ ಯುವತಿಯೊಬ್ಬಳು ಮುಖದ ತುಂಬಾ ಶೇವಿಂಗ್ ಕ್ರೀಮ್ ಹಾಕಿ ಕುಳಿತಿರುವುದನ್ನು ಕಾಣಬಹುದು. ಕ್ಷೌರಿಕನು ಪುರಷರಂತೆ ಯುವತಿ ಮುಖವನ್ನು ಬ್ಲೆಡ್ ನಿಂದ ಶೇವ್ ಮಾಡಿದ್ದಾನೆ.