ಲಂಡನ್: ಮಹಿಳೆಯೊಬ್ಬರು ತನ್ನನ್ನೇ ತಾವು ಮದುವೆಯಾಗಿದ್ದಾರೆ.
20 ವರ್ಷದಿಂದಲೂ ಸರಿಯಾದ ಸಂಗಾತಿ ಸಿಗದ ಹಿನ್ನೆಲೆಯಲ್ಲಿ ತಾವೇ 10 ಲಕ್ಷ ರೂ. ಖರ್ಚು ಮಾಡಿ ತಮ್ಮನ್ನು ತಾವೇ ಮದುವೆಯಾಗಿದ್ದಾರೆ. ಈ ಮದುವೆ ಯುನೈಟೆಡ್ ಕಿಂಗ್ಡಮ್ನಲ್ಲಿ (UK) ನಡೆದಿದೆ.
ಸಾರಾ ವಿಲ್ಕಿನ್ಸನ್ (42) ಎಂಬುವವರೇ ತಮ್ಮನ್ನೇ ತಾವೇ ವಿವಾಹವಾದವರು. ನನ್ನನ್ನೇ ನಾನೇ ವಿವಾಹವಾಗಿದ್ದಕ್ಕೆ ತುಂಬಾ ಖುಷಿಯಾಗಿದೆ. ನನ್ನ ಅದ್ದೂರಿಯ ಮದುವೆಯ ಬಯಕೆ ಕೂಡ ಈಡೇರಿದೆ. ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸಾರಾ ಮದುವೆಯಾಗಿದ್ದಾರೆ.
ಸುಮಾರು 40 ಬಂಧುಮಿತ್ರರ ಸಮ್ಮುಖದಲ್ಲಿ 14 ವ್ರತಗಳನ್ನು ಮಾಡಿ ಸಾರಾ ವಿಧಿವಿಧಾನಗಳನ್ನು ಪೂರೈಸಿದ್ದಾರೆ.