ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಮತದಾರರ ದೃಢೀಕರಣ ಪ್ರಕ್ರಿಯೆಯ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ನಕಲಿ ಮತದಾನ ತಡೆಯುವ ಉದ್ದೇಶದಿಂದ ಆಧಾರ್ ಲಿಂಕ್ ಮಾಡುವ ಬೇಡಿಕೆಗಳು ಮುಂದುವರಿದರೂ, ಯುಐಡಿಎಐ (UIDAI) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಕುಮಾರ್ ನೀಡಿದ ಮಹತ್ವದ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಭುವನೇಶ್ ಅವರು ಸ್ಪಷ್ಟಪಡಿಸುತ್ತಾ, ಆಧಾರ್ ಕಾರ್ಡ್ ಜನತೆಯ ಖಚಿತಗೊಳಿಸುವ (authentication) ಸಾಧನ ಮಾತ್ರ. ಆದರೆ ಇದು ಪ್ರಾಥಮಿಕ ಗುರುತಿನ ದಾಖಲೆ (First Identification Document) ಅಲ್ಲ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ನಕಲಿ ಆಧಾರ್ ಕಾರ್ಡ್‌ಗಳ ಸಮಸ್ಯೆಯನ್ನೂ UIDAI ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ನಕಲಿ ಆಧಾರ್ ಗುರುತಿಸಲು ವಿಶೇಷ QR ಕೋಡ್ ಸ್ಕ್ಯಾನರ್ ಆ್ಯಪ್‌ನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಅಪ್ಲಿಕೇಶನ್ ಅಂತಿಮ ಹಂತದಲ್ಲಿದ್ದು, ಜನರು ತಮ್ಮ ಆಧಾರ್ ಕಾರ್ಡ್ ನ ನೈಜತೆ ತ್ವರಿತವಾಗಿ ಪರೀಕ್ಷಿಸಬಹುದಾದ ಸೌಲಭ್ಯ ಇದರಿಂದ ದೊರೆಯಲಿದೆ ಎಂದು ಭುವನೇಶ್ ಅವರು ತಿಳಿಸಿದರು.
ಈ ಎಲ್ಲ ಅಭಿವೃದ್ಧಿಗಳು ಚುನಾವಣೆ ಸಂದರ್ಭದಲ್ಲಿ ಮತದಾರರ ದೃಢೀಕರಣದ ಪ್ರಕ್ರಿಯೆಯನ್ನು ಸುಧಾರಿಸಲು ಹಾಗೂ ನಕಲಿ ಪಟ್ಟಿ ವಿರೋಧಿಸಲು ಸಹಕಾರಿಯಾಗಲಿದೆ. UIDAI ಈ ಮೂಲಕ ಪ್ರಾಮಾಣಿಕತೆ ಹಾಗೂ ನೈತಿಕ ತತ್ವಗಳಿಗೆ ಬದ್ಧವಿರುವುದನ್ನು ಮತ್ತೆ ಒತ್ತಿ ಹೇಳಿದೆ.








