Aakash Chopra | ಮೊದಲ ಪಂದ್ಯದಲ್ಲಿ ಗೆಲುವು ಯಾರಿಗೆ..? ಚೋಪ್ರಾ ಹೇಳಿದ್ದೇನು..?
ಇಂಗ್ಲೆಂಡ್ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ.
ಇದರ ಬೆನ್ನಲ್ಲೆ ಟೀಂ ಇಂಡಿಯಾ ಇದೀಗ ಚುಟುಕು ಕ್ರಿಕೆಟ್ ಸಮರಕ್ಕೆ ಸಜ್ಜಾಗಿದೆ.
ಮೂರು ಪಂದ್ಯಗಳ ಟಿ 20 ಸರಣಿಯ ಭಾಗವಾಗಿ ಇಂದು ಇಂಡೋ – ಇಂಗ್ಲೆಷ್ ಟಿ 20ವಾರ್ ನಡೆಯಲಿದೆ.
ಈ ಮೂರು ಪಂದ್ಯಗಳಲ್ಲಿ ಯಾರಿಗೆ ಗೆಲ್ಲುವ ಅವಕಾಶಗಳಿವೆ..? ಮೊದಲ ಪಂದ್ಯದಲ್ಲಿ ಗೆಲುವು ಯಾರಿಗೆ..? ಅನ್ನೋದನ್ನ ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ವಿಶ್ಲೇಷನೆ ಮಾಡಿದ್ದಾರೆ.
ಅವರ ಪ್ರಕಾರ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲುವು ಕಾಣುತ್ತಂತೆ ಹಾಗೇ ಎರಡು ತಂಡಗಳು 15 ಸಿಕ್ಸರ್ ಗಳನ್ನು ಬಾರಿಸುತ್ತವಂತೆ.

ಈ ಪಂದ್ಯದಲ್ಲಿ ಜೋಸ್ ಬಟ್ಲರ್, ಡೇವಿಡ್ ಮಲಾನ್ ಸೇರಿ 75 ಕ್ಕೂ ಹೆಚ್ಚು ರನ್ ಬಾರಿಸುತ್ತಾರೆ.
ಈ ಪಂದ್ಯವನ್ನ ಬಟ್ಲರ್ ಒಂಟಿ ಕೈಯಲ್ಲಿ ಗೆದ್ದುಕೊಳ್ತಾರೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಬಟ್ಲರ್ ಜೊತೆಗೆ ಮಲಾನ್ ಕೂಡ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟುತ್ತಾರೆ. ಮಲಾನ್ ಈ ಮ್ಯಾಚ್ ನಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡುತ್ತಾರೆ ಅಂತಾ ನಾನು ನಂಬುತ್ತಿದ್ದೇನೆ.
ಇನ್ನು ಭಾರತದ ವಿಚಾರಕ್ಕೆ ಬಂದರೆ ರೋಹಿತ್ ಶರ್ಮಾ ಓಪನರ್ ಆಗಿ, ಇಶಾನ್, ಸೂರ್ಯಕುಮಾರ್ 70 ಕ್ಕೂ ಹೆಚ್ಚು ರನ್ ಬಾರಿಸುತ್ತಾರೆ.
ಆದ್ರೆ ಮೂರನೇ ಸ್ಥಾನದಲ್ಲಿ ಸ್ಯಾಮ್ಸನ್ ಅಥವಾ ಹೂಡಾ ಅವರಲ್ಲಿ ಯಾರಿಗೆ ಅವಕಾಶ ಕೊಡುತ್ತಾರೆ ಅನ್ನೋದನ್ನ ನೋಡಬೇಕು.
ಇನ್ನು ಎರಡೂ ತಂಡಗಳ ಬಲಾಬಲ ನೋಡೋದಾದ್ರೆ ಭಾರತದ ಮೇಲೆ ಇಂಗ್ಲೆಂಡ್ ಜಯ ಸಾಧಿಸುವ ಅವಕಾಶಗಳು ಹೆಚ್ಚಿವೆ.
ಬೌಲಿಂಗ್ ನಲ್ಲಿ ಭಾರತ ಚೆನ್ನಾಗಿದ್ದರೇ, ಇಂಗ್ಲೆಂಡ್ ಬ್ಯಾಟಿಂಗ್ ನಲ್ಲಿ ಸ್ಟ್ರಾಂಗ್ ಇದೆ ಎಂದು ಚೋಪ್ರಾ ಹೇಳಿದ್ದಾರೆ.