ಮಾನವೀಯತೆ ಮೆರೆದ ಯುವಕ
Aaruva deepakke bembalada belaku 1
ಪ್ರೀತಿಪಾತ್ರರ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಿ ನಾವೆಲ್ಲಾ ಹಿಂತಿರುಗುವಾಗ ನಡುರಾತ್ರಿಯಾಗಿತ್ತು.
ಸುತ್ತಲೂ ಕಗ್ಗತ್ತಲು. ಬೀದಿದೀಪವಷ್ಟೇ ದಾರಿಗೆ ತುಸುಬೆಳಕ ನೀಡಿತ್ತು. ರಸ್ತೆಯಲ್ಲಿ ನಮ್ಮ ವಾಹನ ಬಿಟ್ಟರೆ ಯಾರೊಬ್ಬರ ಸುಳಿವೂ ಅಲ್ಲಿರಲಿಲ್ಲ. Aaruva deepakke bembalada belaku 1
ಮುದ್ರಾಡಿಯ ಮದಗ ಬಳಿ ಚಲಿಸುವಾಗ ಏನೋ ಜೋರಾಗಿ ಅಗೆಯುವ ಶಬ್ದ ಕೇಳಿಸಿತು. ಮಿನುಗುಚಿಟ್ಟೆ ಯಷ್ಟೇ ಬೆಳಕು ದೂರದಲ್ಲಿಕಾಣಿಸುತಿತ್ತು. ಅಲ್ಲಿ ಮಗುವಿನ ಕೂಗು ಕೇಳಿಸಿದಾಗ ಏನೋ ಘಟನೆ ನಡೆಯುತ್ತಿದೆ. ಯಾರಾದರೂ ಮಗುವನ್ನು ಕೊಲ್ಲುತ್ತಿರುವರೋ ಅಥವಾ ಮಗುವೇ ನಿದ್ದೆ ಕಣ್ಣಲ್ಲಿ ಮನೆಯಿಂದ ಹೊರಗೆ ಬಂದು ಅಳುತ್ತಿದೆಯೋ ಒಂದೂ ಅರಿವಾಗದೇ ಸಂಶಯದ ಸುಳಿಯಲ್ಲಿ ಸಿಕ್ಕಿ ಅಣ್ಣನ ಬಳಿ ಬೈಕ್ ನಿಲ್ಲಿಸಲು ಹೇಳಿ ಧ್ವನಿ ಕೇಳಿದ ಸ್ಥಳದ ಕಡೆ ಹೆಜ್ಜೆ ಇಟ್ಟೆವು.
ಬೆಳಕ ಕಂಡ ಸ್ಥಳದತ್ತ ಹೋದಾಗ ಅಲ್ಲೊಬ್ಬ ಎತ್ತರದ ಯುವಕ ನಡುರಾತ್ರಿಯಲ್ಲಿ ಮಳೆಯಲ್ಲಿ ನೆನೆಯುತ್ತ ಉದ್ದದ ಕೋಲನ್ನು ಹಿಡಿದು ನೀರ ರಭಸಕ್ಕೆ ಕುಸಿದು ಬಿದ್ದ
ಮಣ್ಣಿನ ರಾಶಿಯನ್ನು ಸರಿಸಿ ಏನೋ ಹುಡುಕುವ ದೃಶ್ಯ ಕಂಡು ನಾವಿಬ್ಬರೂ ಬೆಚ್ಚಿಬಿದ್ದೆವು.
ದೇವರೇ ! ಇವನು ಇಲ್ಲೇನು ಮಾಡ್ತಾ ಇದ್ದಾನೆ? ನಿಧಿಯ ಆಸೆಗಾಗಿ ಗುಂಡಿ ತೋಡುವ ದೃಶ್ಯ ಸಿನಿಮಾ ದಲ್ಲಷ್ಟೇ ಕಂಡಿದ್ದು. ಅರೇ ಸಾಧ್ಯವಿಲ್ಲ. ನಿಧಿ ಹುಡುಕುವವನು ಕೋಲಲ್ಲೇಕೆ ಮಣ್ಣನ್ನು ಸರಿಸುವನು??
ಇಲ್ಲಾ.. ಇಲ್ಲಾ.. ಏನೋ ನಿಗೂಢ ಅಡಗಿದೆ ಎಂದರಿತು ತುಸು ದೂರದಲ್ಲಿ ಆ ವ್ಯಕ್ತಿಗೆ ಕಾಣದಂತೆ ಅಡಗಿ ಕೂತು ಅವನ ಕೆಲಸವನ್ನೇ ಗಮನಿಸತೊಡಗಿದೆವು.
ಅಣ್ಣ ಮೆಲುದನಿಯಲ್ಲಿ ನುಡಿದ “ಮಗು ಇಲ್ಲೆಲ್ಲೋ ಅಳುತ್ತಿದೆ ಪುಟ್ಟ.. ” ನಿಶಬ್ಧ ಜಾಗದಲ್ಲಿ ಆ ವ್ಯಕ್ತಿ ಅಗೆಯುವ ಶಬ್ದ ಬಿಟ್ಟರೆ ಕೇಳಿಸಿದ್ದು ಮಗುವಿನ ಅರಚಾಟ.
ಈ ಸವಾಲನ್ನು ಹೇಗಾದರೂ ಎದುರಿಸಿ ನೈಜ್ಯತೆ ತಿಳಿಯಬೇಕು ಎಂದು ಮೌನದಲ್ಲೇ ಅಣ್ಣನಿಗೆ ಪ್ರತಿಕ್ರಿಯಿಯಿಸಿದೆ..
ಸ್ವಲ್ಪ ಸಮಯದಲ್ಲಿಯೇ ಅಚ್ಚರಿಯೊಂದು ಕಾದಿತ್ತು.
ಹೌದು! ಆ ವ್ಯಕ್ತಿ ಮಣ್ಣನ್ನು ಸರಿಸಿ ಒಂದು ಜೀವವಿರುವ ನಾಯಿಯನ್ನು ಹೊರತೆಗೆದ ಕ್ಷಣವನ್ನು ನಾವಿಬ್ಬರೂ ಮೂಕವಿಸ್ಮಿತರಾಗಿ ನೋಡಿದೆವು.
ನಾಯಿಯನ್ನು ಆ ವ್ಯಕ್ತಿ ಕಾಪಾಡಿದರೂ ಆ ಪ್ರಾಣಿ ಮಾತ್ರ ಆ ಜಾಗವನ್ನು ಕದಲದೆ ಬೊಬ್ಬೆ ಹಾಕತೊಡಗಿತು. ಅರೇ !ಎಂತಹ ಸೋಜಿಗ.. ಅಲ್ವಾ..
ನಿಮಗೂ ಕೂತೂಹಲ ಕಾಡಿರಬಹುದು..ಮುಂದೇನಾಗಿರಬಹುದು?? ಆ ವ್ಯಕ್ತಿ ಯಾರು?? ನಾಯಿ ಯಾಕೆ ಅಲ್ಲೇ ನಿಂತು ರೋದಿಸುತ್ತಿದೆ ಎನ್ನುವ ನೂರು ಪ್ರಶ್ನೆಗಳು ನಮ್ಮನ್ನು ಕಾಡತೊಡಗಿ ಕಾದು ನಿಂತೆವು.
ಆ ಎತ್ತರದ ವ್ಯಕ್ತಿ ಜೋರಾದ ಮಳೆಯಲ್ಲಿ ಒದ್ದೆಯಾಗುತ್ತಾ ಮಣ್ಣನ್ನು ಸರಿಸುತ್ತಲೇ ಇದ್ದ.
ಇನ್ನೇನಿರಬಹುದು ಎಂದು ಆಲೋಚಿಸುವಾಗಲೇ ಒಂದೊಂದೇ ನಾಯಿ ಮರಿಗಳನ್ನು ಜೋಪಾನವಾಗಿ ಹೊರತೆಗೆಯುತ್ತಿದ್ದ ವ್ಯಕ್ತಿಯನ್ನು ಕಂಡು ನನ್ನ ಕಣ್ಣಂಚಲ್ಲಿ ಕಂಬನಿ ಹರಿಯಿತು.
4 ನಾಯಿಮರಿಗಳು ಅಳುತ್ತಲೇ ತಾಯಿಯ ಮಡಿಲು ಸೇರುತ್ತಾ ” ಕುಯಿ…. ಕುಯಿ….” ಎಂದು ಪುಟ್ಟ ಮಗುವಿನ ದನಿಯಂತೆ ಅಳುತ್ತಾ ತಾಯಿ ನಾಯಿ ಯ ಆಲಂಗಿಸಿದವು.
ಆ ವ್ಯಕ್ತಿಯ ಸಮಯಪ್ರಜ್ಞೆ ಗೆ, ಆ ಜೀವಗಳ ಮೇಲೆ ಕಾಳಜಿ ತೋರಿ ತನ್ನ ಜೀವವ ಮರೆತು ನಡುರಾತ್ರಿ ಆ ಮಳೆಯಲ್ಲಿ ನೆನೆಯುತ್ತ ಒಬ್ಬನೇ ಶ್ರಮವಹಿಸಿ ಮುಗ್ದ ಪ್ರಾಣಿಗಳ ಜೀವ ಉಳಿಸಿದ ಸೇವೆಗೆ ಹೃದಯ ತುಂಬಿ ಬಂತು.
ಕತ್ತಲೆಯಲ್ಲಿ ಅಡಗಿದ್ದ ನಾವು ಆ ವ್ಯಕ್ತಿಗೊಂದು ಸಲಾಂ ಹೇಳೋಣ ಎನಿಸಿ ಅವನ ಬಳಿ ಹೆಜ್ಜೆ ಇಟ್ಟೆವು.
ನಮ್ಮ ಟಾರ್ಚ್ ಲೈಟ್ ಕಂಡಾಗ ಆ ವ್ಯಕ್ತಿಯೇ ದೈರ್ಯದಿಂದ ನಮ್ಮತ್ತ ಬರತೊಡಗಿದ.
ಹೆಜ್ಜೆಗಳು ಸಮೀಪವಾಗುತ್ತಲೇ ನಾ ಭಾವುಕಳಾಗಿ ಅಲ್ಲೇ ನಿಂತೆ.
ಕಾರಣವಿಷ್ಟೇ… ಮಾನವೀಯತೆ ತೋರಿ 5 ಜೀವಗಳ ಉಳಿಸಿದ ದೇವರು ಬೇರಾರು ಅಲ್ಲ..
ನಮ್ಮೊಡನೆ ಸದಾ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು, ನನ್ನ ಸಾಧನೆಗೆ ಹುರಿದುಂಬಿಸುವ “ಮದಗದ ಹರೀಶ್ ಶೆಟ್ಟಿ ಅಣ್ಣ. “
ಕಣ್ಣುಗಳು ಕಂಡ ದೃಶ್ಯವ ನಂಬಲಾಗದೆ ಅವರನ್ನೇ ದಿಟ್ಟಿಸಿ ನೋಡಿದವು.
ಆಹಾ ! ನಿಜಕ್ಕೂ ಅವರ ಶ್ರಮ ಮೆಚ್ಚುವಂತದ್ದು.
ಮಾತುಗಳು ನಾಲಗೆ ತನಕ ಬಂದು ಅಲ್ಲೇ ನಲಿದಾಡಿದವು.
ಅಣ್ಣ ಹರೀಶ್ ಶೆಟ್ರನ್ನು ಮಾತಾಡಿಸಿ “ಬಾರಿ ಎಡ್ಡೆ ಬೇಲೆ ಮಲ್ತರ್ ಅಣ್ಣ.. ಮಸ್ತ್ ಖುಷಿ ಆಂಡ್.. ನಮ ಬಾಲೆದ ಸ್ವರೋ ಕೇಂದ್ ಗಾಡಿ ಉಂತಾದ್ ಬತ್ತಿನಿ ” ಎಂದು ವಿನಮ್ರ ಭಾವದಿಂದ ನುಡಿದ.
ಮೆಲ್ಲಗೆ ನಕ್ಕ ಹರೀಶ್ “ಎಂಕ್ಲಾ ಬಾಲೆದ ಸ್ವರೊ ಕೇಂಡ್. ಪುಣ್ಯ.. ಆ ಜೀವೊಲೆಗ್ ದಾಲ ಆಇಜಿ ” ಎಂದು ಮುಗ್ದ ಭಾವದಿಂದ ನುಡಿದರು.
ನನ್ನನ್ನು ಅಚ್ಚರಿಯ ಲೋಕಕ್ಕೆ ಕೊಂಡೊಯ್ದ ಘಟನೆಯನ್ನು ಒಮ್ಮೆ ನೆನೆದು ಹರೀಶ್ ರವರಲ್ಲಿ ಮಾತಾಡಿಸಿ ಕೃತಜ್ಞತೆಯನ್ನು ಅರ್ಪಿಸಿದೆ.
ಬೀದಿನಾಯಿ ಮತ್ತು ಅದರ ಮರಿಗಳನ್ನು ತನ್ನ ಮನೆಯ ಸೂರಿನಲ್ಲಿ ಬೆಚ್ಚನೆಯ ಗೋಣಿ ಹಾಸಿ ಇರಿಸಿ ತಿನ್ನಲೊಂದಿಷ್ಟು ಅನ್ನವ ಉಣಬಡಿಸಿ ನಾಯಿಯ ಹಸಿವ ನೀಗಿಸಿದರು.
ನಾವಿಬ್ಬರೂ ಮನೆಯ ದಾರಿಯಲ್ಲಿ ಚಲಿಸಿದೆವು.
ಆಹಾ ! ಎಲ್ಲೋ ಅಲೆದಾಡಿ ಬದುಕ ಸವೆಸುವ ಜೀವಗಳನ್ನೇ ಇಷ್ಟೊಂದು ಕನಿಕರ ತೋರಿ ಕಷ್ಟ ಪಟ್ಟು ಕಾಪಾಡಿ ಆಶ್ರಯ ನೀಡಿದ ಹರೀಶ್ ಶೆಟ್ಟಿ ಅಣ್ಣ ಮುಂದೆ ಜನನಾಯಕನಾದರೆ ಈ ಊರಿನ ಜನರ ಕಷ್ಟಗಳಿಗೆ ಹೇಗೆಲ್ಲ ಸ್ಪಂದನೆ ನೀಡಬಹುದು.. ಅಲ್ವಾ..
ಇರಬೇಕು.. ಇರಬೇಕು.. ಇಂತಹ ಯುವಕ.. ನಾಡ ಕಟ್ಟಲು.. ಜನರ ಕಣ್ಣೀರ ಒರೆಸಲು..
ಒಬ್ಬ ತಾಯಿ 10 ಮಕ್ಕಳನ್ನು ಹಡೆದರೇನು ಭಾಗ್ಯವಯ್ಯ..
ಇಂತಹ ಒಬ್ಬ ಮಗ ಹುಟ್ಟಿದರೆ ಸಾಕು.
ಆತ ತಾಯಿಯನ್ನಷ್ಟೇ ಅಲ್ಲ..ಸಾವಿರಾರು ಜೀವಗಳನ್ನೇ ಮಗುವಿನಂತೆ ಕಾಪಾಡುವನು. ಎನ್ನುವುದು ನನ್ನ ಮನದಾಳದ ಭಾವನೆ.
ಹರೀಶ್ ಶೆಟ್ಟಿ ಮದಗ ಅಣ್ಣ ನಮ್ಮ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಹಸಂಚಾಲಕರಾಗಿದ್ದೆ ನನಗೆ ನೂರು ಆನೆಯ ಬಲ.
ಶುಭವಾಗಲಿ ಅಣ್ಣ.. ನೀವು ಕಂಡ ಕನಸುಗಳು ಬಹುಬೇಗ ನೆರವೇರಲಿ..
ನಿಮ್ಮ ಮಾನವೀಯತೆ ಗೆ ಲೋಕವೇ ಶಿರಬಾಗಲಿ. ಸೇವೆ ಮಾಡುವ ಕೈಗಳಿಗೆ ಇನ್ನಷ್ಟು ಶಕ್ತಿ ಬರಲಿ.
ಚೈತ್ರ ಕಬ್ಬಿನಾಲೆ✍️✍️✍️
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹೆಬ್ರಿ ಘಟಕದ ಸಂಚಾಲಕಿ
ಸಾಕ್ಷಾ ಟಿವಿಯ ಆರುವ ದೀಪಕ್ಕೆ ಬೆಂಬಲದ ಬೆಳಕು – ಅಂಕಣಕಾರರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv