ADVERTISEMENT
Thursday, March 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕನ್ನಡದ ಕಂಪು ಕುವೆಂಪು ನನಗಿಷ್ಟ

Shwetha by Shwetha
November 3, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Aaruva deepakke bembalada belaku 2
Share on FacebookShare on TwitterShare on WhatsappShare on Telegram

ಕನ್ನಡದ ಕಂಪು ಕುವೆಂಪು ನನಗಿಷ್ಟ – Aaruva deepakke bembalada belaku 2

ನನ್ನೊಡಲ ಬಾಂದಳದಿ ಪ್ರಕೃತಿಯ ಚಿತ್ತಾರ ಬರೆದು ಸಾಹಿತ್ಯ ಲೋಕಕೆ ಹೆಜ್ಜೆ ಇಡಲು ಪ್ರೇರಣೆಯೇ ಕವಿ ಕುವೆಂಪುರವರು.
ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಎನ್ನುತ್ತಾ ನನ್ನ ಬದುಕಿನ ನೂರೆಂಟು ತಿರುವುಗಳನ್ನು ಎದುರಿಸಿ ಧೈರ್ಯದಿಂದ ಮುನ್ನಡೆಯಲು ಕಲಿಸಿದ್ದೆ ಕುವೆಂಪು ರವರ ಕವನಗಳು.  Aaruva deepakke bembalada belaku 2

Related posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

March 12, 2026
ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

March 12, 2026

Aaruva deepakke bembalada belaku 2
ಆಹಾ ! ರಾಷ್ಟ್ರ ಕವಿಯ ಕಲ್ಪನೆಯಲ್ಲಿ ಅರಳಿದ ಪದಗಳ ಮಳೆಗೆ ನೆನೆದು ನಾನಾದೆ ಪುಟ್ಟ ಕವಯಿತ್ರಿ.

ಎಲ್ಲರ ಮನದಲ್ಲಿ ಕುವೆಂಪು ಕವಿ ಯಾದರೆ ನನಗವರು “ಬದುಕಿಗೊಂದು ಆದರ್ಶ ” ಕಲಿಸಿದ ಗುರು. ಅವರ ಬದುಕಿನ ಪುಟಗಳನ್ನು ನಾ ತಿರುವಿ ನೋಡಿದಾಗ ಅವರ ವ್ಯಕ್ತಿತ್ವಕ್ಕೆ ನಿರ್ಮಲ ಭಾವದಿಂದ ಶಿರಬಾಗಿದೆ.
ಕಾರಣವಿಷ್ಟೇ, ಕುವೆಂಪು ರವರು ತನ್ನ ಪ್ರಸಿದ್ಧಿ ಗಾಗಿ ಎಂದೂ ಹೊರ ರಾಜ್ಯ , ರಾಷ್ಟ್ರಗಳಿಗೆ ಹೋದವರಲ್ಲ. ಸನ್ಯಾಸತ್ವ ದೀಕ್ಷೆಗಾಗಿ ಕೋಲ್ಕತ್ತಾ ಕ್ಕೆ ಹಾಗೆಯೇ ಜ್ಞಾನಪೀಠ ಪ್ರಶಸ್ತಿ ಪಡೆಯಲು ಒಮ್ಮೆ ದೆಹಲಿ ಗೆ ಹೋಗಿದ್ದರಷ್ಟೇ. ರಾಷ್ಟ್ರ ಕವಿ ಪಟ್ಟವಿದ್ದರೂ ಸರಳತೆಯಿಂದ ಬದುಕುತ್ತ ತನ್ನ ನೆಲದ, ಕನ್ನಡ ಮಣ್ಣಿನ ಮೇಲಿರುವ ಅಭಿಮಾನದ ಸಿಂಚನಕ್ಕೆ , ಪ್ರಕೃತಿ ದೇವಿಯ ಅಪರಿಮಿತ ಭಕ್ತಿಗೆ ನಾ ಸೋತು ಕುವೆಂಪು ರವರನ್ನು ಹೃದಯದೇಗುಲದಿ ಇರಿಸಿ ಪೂಜಿಸುವ ಆರಾಧಕಿಯಾದೆ.

ವಿಶ್ವವೇ ಮಹಾಕಾವ್ಯದ ಯುಗ ಮುಗಿಯಿತು ಎಂದಾಗ ಕೋಟಿ ಜನ್ಮದ ಫಲದಂತೆ ರಾಮಾಯಣ ದರ್ಶನಂ ಮಹಾಕಾವ್ಯ ಹುಟ್ಟುತ್ತದೆ. ಕುವೆಂಪುರವರೆ ಸ್ವತಃ ಹೇಳಿರುವಂತೆ ರಾಮಾಯಣ ದರ್ಶನಂ ಕೃತಿಯನ್ನು ಅವರು ಸೃಷ್ಟಿಸಲಿಲ್ಲ, ಆ ಮಹಾಕೃತಿಯೆ ಕವಿ ಕುವೆಂಪುರವರನ್ನು ಸೃಷ್ಟಿಸಿತು..! ಯುಗಮಾನದ ಜನಕೋಟಿಯ ಹೆಬ್ಬಯಕೆಯಿಂದ ಮಹಾಕಾವ್ಯ ಹುಟ್ಟುತ್ತದೆ ಎನ್ನುತ್ತಾರೆ.

ಆರುವ ದೀಪಕ್ಕೆ ಬೆಂಬಲದ ಬೆಳಕು – ಅಧ್ಯಾಯ 1

ಕುವೆಂಪು ಕಾವ್ಯನಾಮದ ಸೊಗಸನ್ನು ಪ್ರೀತಿಸುವವರು, ದ್ವೇಷಿಸುವವರು, ಪ್ರೀತಿಸಿ ನಂತರ ದ್ವೇಷಿಸಿದವರು, ದ್ವೇಷಿಸಿ ಬಳಿಕ ಪ್ರೀತಿಸಿದವರು ಎಲ್ಲರೂ ಉಂಟು! ಆದರೆ ಅವರ ಸಾಹಿತ್ಯವನ್ನು ಅಧ್ಯಯನ ಮಾಡಿಯೂ ದ್ವೇಷಿಸಿದವರು ಇಲ್ಲವೇ ಇಲ್ಲ..

ಅದಕ್ಕಾಗಿಯೇ ಅಲ್ಲವೇ ವರಕವಿ ಬೇಂದ್ರೆ ಯವರು `ಯುಗದ ಕವಿಗೆ ಜಗದ ಕವಿಗೆ, ಶ್ರೀರಾಮಾಯಣ ದರ್ಶನದಿಂದಲೆ ಕೈ ಮುಗಿದ ಕವಿಗೆ ಮಣಿಯದವರಾರು?’ ಎಂದಿದ್ದು.

“ಮನುಜ ಮತ, ವಿಶ್ವಪಥ” ಎಂಬ ಮಹಾನ್ ಸಂದೇಶದ ಮೂಲಕ ಅಲ್ಪಮಾನವರೆಲ್ಲ ವಿಶ್ವಮಾನವರಾಗಬೇಕೆಂದು ಕರೆಕೊಟ್ಟರು. ಹಾಗೆಯೇ ಬದುಕಿದ ಕುವೆಂಪು ಪ್ರಪಂಚದಲ್ಲಿರುವ ಎಲ್ಲ ಧರ್ಮಗಳ ಎಲ್ಲ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿ, ಅವುಗಳ ಸಾರವನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡವರು.

ಕುವೆಂಪು ರವರ ದೌರ್ಬಲ್ಯಗಳನ್ನು ಹೇಳುವ ಸಾವಿರ ಜನ ಇದ್ದರೂ ಆ ವಿಚಾರಗಳನ್ನು ಸೂಕ್ಷ್ಮ ವಾಗಿ ಅಧ್ಯಯನ ಮಾಡಿದಾಗ “ತಪ್ಪನ್ನು ಖಂಡಿಸುವ ಅವರ ನೇರ ಸ್ವಭಾವ ದೌರ್ಬಲ್ಯ ವಲ್ಲ, ಬದಲಾಗಿ ಬದಲಾವಣೆಗೆ ದಾರಿ ” ಎನ್ನುವುದು ನಾನು ಅರಿತ ಅಕ್ಷರಹ ಸತ್ಯ.

Aaruva deepakke bembalada belaku 2

ಕುವೆಂಪು ರವರು ನನಗಷ್ಟೇ ಸ್ಫೂರ್ತಿಯ ಚಿಲುಮೆಯಲ್ಲ. ಮಕ್ಕಳ ಇಚ್ಛೆಯಂತೆ ಬದುಕ ಕಟ್ಟಲು ಸ್ವಾತಂತ್ರ್ಯ ನೀಡಿದ್ದಾರೆ, ಅವರ ಕುಟುಂಬದಲ್ಲಿ ಅಂತರ್ಜಾತಿ ವಿವಾಹಕ್ಕೆ ಮುನ್ನುಡಿ ಬರೆದಿದ್ದಾರೆ, ಶ್ರೀಮಂತಿಕೆಯಿದ್ದರೂ ಸರಳತೆಯೇ ಉಸಿರಾಗಿಸಿ ಮಕ್ಕಳ ಮದುವೆಯನ್ನು ಬಹಳ ಸರಳವಾಗಿ ನಡೆಸಿಕೊಡುತ್ತಾರೆ. ಈ ಎಲ್ಲಾ ಉತ್ತಮ ಅಂಶಗಳು ಇಡೀ ಸಮಾಜಕ್ಕೆ ಮಾದರಿ ಯೇ ಸರಿ.
ನಿದ್ದೆಯಿಂದೆಚ್ಚರಿಸಿ ನೀವೊಮ್ಮೆ ಯಾವ ಕವಿ ನಿನಗಿಷ್ಟ ಎಂದರೆ ಮುಚ್ಚಿದ ಅಂತರಾಳವ ಒಮ್ಮೆಲೇ ತೆರೆದು ಹೆಮ್ಮೆಯಿಂದ ಎದೆತಟ್ಟಿ ನುಡಿವೆ ನಾನು “ಕನ್ನಡದ ಕಂಪು ಕುವೆಂಪು ನನಗಿಷ್ಟ “ಎಂದು.

ಚೈತ್ರ ಕಬ್ಬಿನಾಲೆ ✍️✍️✍️

ಸಾಕ್ಷಾ ಟಿವಿಯ ಆರುವ ದೀಪಕ್ಕೆ ಬೆಂಬಲದ ಬೆಳಕು – ಅಂಕಣಕಾರರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಇತ್ತೀಚಿನ ಸುದ್ದಿಗಳಿಗಾಗಿ, ನಮ್ಮ ವಾಟ್ಸಾಪ್ ಗ್ರೂಪ್ ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿ

https://chat.whatsapp.com/HZ6kIJcdmq8GNeQb9URf9M

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

https://twitter.com/SaakshaTv

Tags: Aaruva deepakke bembalada belakuKuvempuಆರುವ ದೀಪಕ್ಕೆ ಬೆಂಬಲದ ಬೆಳಕುಕನ್ನಡದ ಕಂಪು ಕುವೆಂಪು ನನಗಿಷ್ಟ
ShareTweetSendShare
Join us on:

Related Posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

by Shwetha
March 12, 2026
0

ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಮರಳಿ ಪಡೆಯಲು ಹೊಸ ರಾಜಕೀಯ ತಂತ್ರವನ್ನು ರೂಪಿಸಿದೆ. ಈ ತಂತ್ರಕ್ಕೆ ಆರ್‌ಎಸ್‌ಎಸ್ ಸಹ ಒಪ್ಪಿಗೆ...

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

by Shwetha
March 12, 2026
0

ಮಾರ್ಚ್ 28ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಮುಂದೂಡಲಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಅದರ ಪರಿಣಾಮಗಳಿಂದ ಹಲವು ವ್ಯವಸ್ಥಾತ್ಮಕ ಸಮಸ್ಯೆಗಳು...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

NCERT ಪಠ್ಯಪುಸ್ತಕಗಳ ಸಮಗ್ರ ಪರಿಶೀಲನೆ: ಸುಪ್ರೀಂ ಕೋರ್ಟ್ ಸೂಚನೆ

by Shwetha
March 12, 2026
0

ಸುಪ್ರೀಂ ಕೋರ್ಟ್ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಮಹತ್ವದ ಸೂಚನೆ ನೀಡಿದೆ. NCERT ಪ್ರಕಟಿಸಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಷಯಕ್ಕೆ...

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

by Shwetha
March 12, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಪ್ರಸ್ತುತ ಸಂದರ್ಭದಲ್ಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ತೈಲ ಪೂರೈಕೆ ಮಾರ್ಗ 'ಹಾರ್ಮುಜ್ ಜಲಸಂಧಿ' ಬಹುತೇಕ ಸ್ತಬ್ಧಗೊಂಡಿದೆ. ಇರಾನ್ ನೀಡಿದ್ದ ನೇರ...

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

by Shwetha
March 12, 2026
0

ಬೆಂಗಳೂರು ನಗರದಲ್ಲಿನ ಹೋಟೆಲ್‌ಗಳಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಕೆಲವು ತಿಂಡಿಗಳನ್ನು ತಾತ್ಕಾಲಿಕವಾಗಿ ತಯಾರಿಸದಂತೆ ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ವಿಶೇಷವಾಗಿ ಹೆಚ್ಚು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram