ಅಬ್ಬಾ.. ರಷ್ಯಾ ಮಹಿಳೆಯ ಹೊಟ್ಟೆಯಲ್ಲಿ ಹಾವು ! ವೈದ್ಯರು ಹೊಟ್ಟೆಯಿಂದ ಹಾವನ್ನು ಹೊರತೆಗೆಯುವ ವಿಡಿಯೋ ಸಖತ್ ವೈರಲ್ !
ಡಾಗೆಸ್ತಾನ್, ಸೆಪ್ಟೆಂಬರ್01: ಹಾವು ಎದುರಾಗುವ ಸಂದರ್ಭವನ್ನು ಕಲ್ಪಿಸುವುದು ಕೂಡ ಅತ್ಯಂತ ಭಯಾನಕ. ಹಾಗಿರುವಾಗ ಅಂತರ್ಜಾಲದಲ್ಲಿ ನಂಬಲಸಾಧ್ಯವಾದ ಘಟನೆಯ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಆ ವಿಡಿಯೋದಲ್ಲಿ ರಷ್ಯಾದ ವೈದ್ಯರು ರಷ್ಯಾದ ಮಹಿಳೆಯ ಬಾಯಿಯಿಂದ 4 ಅಡಿ ಉದ್ದದ ಹಾವನ್ನು ಹೊರತೆಗೆಯುವ ದೃಶ್ಯವಿದೆ. ಹಾವು ಹೊಟ್ಟೆಯಿಂದ ಹೊರಬಂದಾಗ ವೈದ್ಯೆ ಹಾವನ್ನು ನೋಡಿ ಗಾಬರಿಗೊಳ್ಳುವ ದೃಶ್ಯವೂ ಇದೆ.
ರಷ್ಯಾದ ಡಾಗೆಸ್ತಾನ್ನ ಲೆವಾಶಿ ಗ್ರಾಮದಲ್ಲಿರುವ ತನ್ನ ತೋಟದ ಮನೆಯಲ್ಲಿ ಮಹಿಳೆಯೊಬ್ಬಳು ಬಾಯಿಯನ್ನು ತೆರೆದು ವಿಶ್ರಾಂತಿ ಪಡೆಯುತ್ತಿದ್ದಳು. ಆಗ ಸರೀಸೃಪವೊಂದು ಆಕೆಯ ತೆರೆದ ಬಾಯಿಯ ಮೂಲಕ ಹೊಟ್ಟೆಯನ್ನು ಸೇರಿದೆ. ಅವಳಿಗೆ ಎಚ್ಚರವಾದ ಬಳಿಕ, ಅನಾರೋಗ್ಯದಿಂದ ಬಳಲುತ್ತಿದ್ದಳು ಮತ್ತು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಭೀಕರ ಹೊಟ್ಟೆನೋವಿಗೆ ಅವಳ ಹೊಟ್ಟೆಯೊಳಗೆ ಏನೋ ಇರುವುದು ಕಾರಣ ಎಂದು ಅರಿತುಕೊಂಡ ವೈದ್ಯರು ಅವಳನ್ನು ಸಾಮಾನ್ಯ ಅರಿವಳಿಕೆಗೆ ಒಳಪಡಿಸಿದರು.
ಪ್ರಜ್ಞಾಹೀನಗೊಳಿಸಿದ ಮಹಿಳೆಯ ಬಾಯಿಗೆ ವೈದ್ಯರು ಟ್ಯೂಬ್ ಹೊಟ್ಟೆಯಲ್ಲಿನ ವಸ್ತುವನ್ನು ಹೊರತೆಗೆಯಲು ಕಾರ್ಯ ಪ್ರವೃತ್ತರಾದರು. ಆ ವಸ್ತು ಹೊರ ಬಂದಾಗ ಹೊಟ್ಟೆಯಲ್ಲಿ ಇದ್ದದ್ದು ಹಾವು ಎಂದು ಗೊತ್ತಾಗಿದೆ. ಹೊಟ್ಟೆಯಿಂದ ಹಾವು ಹೊರಬಂದಿರುವುದನ್ನು ನೋಡಿ ವೈದ್ಯೆ ಆಘಾತ ವ್ಯಕ್ತಪಡಿಸಿದ್ದಾರೆ. ನಂತರ ಸರೀಸೃಪವನ್ನು ವೈದ್ಯಕೀಯ ಬಕೆಟ್ಗೆ ಬಿಡಲಾಗಿದೆ.
https://twitter.com/AlBayanNews/status/1300331423673573376?s=19
ಮಹಿಳೆಯ ಬಾಯಿಂದ ಹಾವನ್ನು ಹೊರ ತೆಗೆಯುವ ಪ್ರಕ್ರಿಯೆಯ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹಾವು ಹೊಟ್ಟೆಯಿಂದ ಹೊರಗೆ ಬಂದಾಗ ಜೀವಂತವಾಗಿತ್ತೇ ಅಥವಾ ಮಹಿಳೆಯ ಹೊಟ್ಟೆಯಲ್ಲಿ ಎಷ್ಟು ಸಮಯ ಇತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.








