ಯುಎಇ ನಲ್ಲಿರುವ ಶಾರ್ಜಾದ ಅತಿ ದೊಡ್ಡ ಕಟ್ಟಡಗಳ ಪೈಕಿ ಒಂದಾದ ಅಬ್ಕೋ ಟವರ್ ಮಂಗಳವಾರ ರಾತ್ರಿ ಹೊತ್ತಿ ಉರಿದಿದೆ. ಅಲ್ ನಹಾದಾದಲ್ಲಿರುವ 47 ಮಹಡಿಗಳ ಅತಿ ದೊಡ್ಡ ಕಟ್ಟಡಗಳ ಪೈಕಿ ಒಂದಾದ ಅಬ್ಕೋ ಟವರ್ ನಲ್ಲಿ ರಾತ್ರಿ ಸುಮಾರು 9 ಗಂಟೆಯ ಸಮಯಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಬರೋಬ್ಬರಿ 2 ಗಂಟೆಗಳ ಕಾಲ ಈ ಗಗನಚುಂಬಿ ಕಟ್ಟಡ ಧಗಧಗನೆ ಹೊತ್ತಿ ಉರಿದಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ 13 ಅಗ್ನಿಶಾಮಕ ದಳ ಹಾಗೂ ಡ್ರೋನ್ ಫೈಟರ್ಸ್ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಆಗಬಹುದಾದ ಭೀಕರ ಅನಾಹುತವನ್ನು ತಪ್ಪಿಸಿದ್ದಾರೆ. ಘಟನೆಯಲ್ಲಿ ಏಳು ಮಂದಿಗೆ ಗಾಯಗಳಾಗಿವೆ ಎನ್ನಲಾಗುತ್ತಿದ್ದು, ಇನ್ನಷ್ಟು ಮಾಹಿತಿ ಹೊರಬರಬೇಕಿದೆ. ಕಟ್ಟಡಕ್ಕೆ ಬೆಂಕಿ ಹೇಗೆ ಬಿತ್ತು ಎಂಬುವುದರ ಬಗ್ಗೆ ಕೂಡ ಇನ್ನಷ್ಟೇ ಗೊತ್ತಾಗಬೇಕಿದೆ.
10 ಕೋ. ರೂ. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡ – ಕಾಮಗಾರಿ ಶಿಲಾನ್ಯಾಸ ನೆರವೇರಿಸಿದ ಸಾರಿಗೆ ಸಚಿವ ಬೈರತಿ ಸುರೇಶ್
ಬೆಂಗಳೂರು: ಹೆಬ್ಬಾಳ ವಿಧಾನಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತೊಂದು ಸುಸಜ್ಜಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಕ್ಷೇತ್ರದ ಶಾಸಕರೂ ಆಗಿರುವ ಸಾರಿಗೆ ಸಚಿವ ಬೈರತಿ ಸುರೇಶ್...








