FAF ನಾಯಕತ್ವದಲ್ಲಿ RCB ಅದ್ಭುತಗಳನ್ನ ಸೃಷ್ಟಿಸಲಿದೆ.. ಹೊಸ ನಾಯಕನ ಬಗ್ಗೆ ABD ಹೇಳಿದ್ದೇನು..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಹೊಸ ಯುಗ ಆರಂಭವಾಗಿದೆ.
ಇಂದಿನಿಂದ ರೆಡ್ ಅಂಡ್ ಗೋಲ್ಡ್ ಕ್ಯಾಂಪ್ ನಲ್ಲಿ ಫಾಫ್ ಮೇನಿಯಾ ಶುರುವಾಗಿದೆ. ಚಾಲೆಂಜರ್ಸ್ ತಂಡಕ್ಕೆ ಆಫ್ರಿಕನ್ ಲಯನ್ ಎಂಟ್ರಿ ಕೊಟ್ಟಿದೆ.
ಕೊನೆಗೂ ಇಂಡಿಯನ್ ಪ್ರಿಮಿಯರ್ ಲೀಗ್ ನ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಆಫ್ರಿಕಾದ ಸೂಪರ್ ಸ್ಟಾರ್ ಫಾಫ್ ಡುಪ್ಲೇಸಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮದಲ್ಲಿ ಫ್ರಾಂಚೈಸಿ ನೂತನ ನಾಯಕನನ್ನು ಘೋಷಣೆ ಮಾಡಿದೆ.
ಇನ್ನು ಆರ್ ಸಿಬಿ ತಂಡದ ಜವಾಬ್ದಾರಿ ಹೊತ್ತಿರುವ ಫಾಫ್ ಗೆ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದಾರೆ.
ಟ್ವಿಟ್ಟರ್ ನಲ್ಲಿ ಎಬಿಡಿ… ಫಾಫ್ ಡುಪ್ಲೇಸಿಸ್ ಆರ್ ಸಿಬಿ ತಂಡದ ನಾಯಕರಾಗಿರೋದು ನನಗೆ ಅಚ್ಚರಿ ತಂದಿಲ್ಲ.
ಯಾಕಂದ್ರೆ ಹರಾಜಿನಲ್ಲಿ ಆರ್ ಸಿಬಿ ಫ್ರಾಂಚೈಸಿ ಫಾಫ್ ಅವರನ್ನ ಖರೀಸುತ್ತಿದ್ದಂತೆ ತಂಡಕ್ಕೆ ನಾಯಕ ಸಿಕ್ಕಾಯ್ತು ಅಂತಾ ನನಗೆ ಅನಿಸಿತ್ತು.
ಇನ್ನು ಫಾಫ್ ಅದ್ಭುತ ನಾಯಕ, ನಾಯಕತ್ವಕ್ಕೆ ಹೇಳಿ ಮಾಡಿಸಿದ ವ್ಯಕ್ತಿ. ಚಾಣಾಕ್ಷ ನಾಯಕನಾಗಿದ್ದು, ನನಗೆ ಯಾವುದೇ ಸಂಶಯವಿಲ್ಲ, ಫಾಫ್ ಕ್ಯಾಪ್ಟನ್ಸಿಯಲ್ಲಿ ಆರ್ ಸಿಬಿ ಅದ್ಭುತಗಳನ್ನು ಸೃಷ್ಠಿಸಲಿದೆ ಎಂದಿದ್ದಾರೆ.