IPL 2022: RCBಯನ್ನ ಮುನ್ನಡೆಸುತ್ತಿರುವ 7ನೇ ಕ್ಯಾಪ್ಟನ್ FAF
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು..? ಎಂಬ ಮಿಲಿಯನ್ ಡಾಲರ್ ಗಳ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ. ದಕ್ಷಿಣ ಆಫ್ರಿಕಾದ ಸ್ಟಾರ್ ಫಾಫ್ ಡುಪ್ಲೆಸಸ್ ಆರ್ ಸಿಬಿ ತಂಡದ ನಾಯಕರಾಗಿ ನೇಮಕವಾಗಿದ್ದಾರೆ.
RCB ಅನ್ ಬಾಕ್ಸ್ ಕಾರ್ಯಕ್ರಮದಲ್ಲಿ ಬೆಂಗಳೂರು ಫ್ರಾಂಚೈಸಿ ಫಾಫ್ ಅವರನ್ನ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಈ ಆವೃತ್ತಿಯಿಂದ ಐಪಿಎಲ್ ನಲ್ಲಿ ಫಾಫ್ ಡುಪ್ಲಸೀಸ್ ರಾಯಲ್ ಚಾಲೆಂಜರ್ಸ್ ತಂಡವನ್ನು ಮುನ್ನಡೆಸುತ್ತಾರೆ. ಹೀಗಾಗಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳು ಇದೆ.
ಅಂದಹಾಗೆ ಫಾಫ್ ಡುಪ್ಲೆಸಸ್ ರಾಯಲ್ ಚಾಲೆಂಜರ್ಸ್ ತಂಡದ ಏಳನೇ ಕ್ಯಾಪ್ಟನ್ ಆಗಿದ್ದಾರೆ. 2008ರ ಐಪಿಎಲ್ ಯಿಂದ ಇಲ್ಲಿಯವರೆಗೂ ಆರ್ ಸಿಬಿ ತಂಡವನ್ನು ಆರು ಮಂದಿ ಮುನ್ನಡೆಸಿದ್ದಾರೆ.
2008ರಿಂದಲೂ ಐಪಿಎಲ್ ಟೂರ್ನಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿ ಮೊದಲ ಸೀಸನ್ನಲ್ಲಿ ರಾಹುಲ್ ದ್ರಾವಿಡ್ ಅವರು ತಂಡವನ್ನ ಮುನ್ನಡೆಸಿದ್ದರು.
2009ರಲ್ಲಿ ನಾಯಕತ್ವದ ಬದಲಾವಣೆ ಕಂಡ ಆರ್ಸಿಬಿ ಕ್ಯಾಪ್ಟನ್ ಆಗಿ ಇಂಗ್ಲೆಂಡ್ನ ಕೇವಿನ್ ಪೀಟರ್ಸನ್ ತಂಡವನ್ನ ಮುನ್ನಡೆಸಿದ್ದರು.
ಆದ್ರೆ ಟೂರ್ನಿಯ ಮಧ್ಯೆದಲ್ಲಿ ಪೀಟರ್ ಸನ್ ಟೂರ್ನಿಯಿಂದ ದೂರವಾದರು. ಆಗ ಕನ್ನಡಿಗ ಅನಿಲ್ ಕುಂಬ್ಳೆ ತಂಡದ ನಾಯಕರಾದ್ರು. ಆ ಸೀಸನ್ ನಲ್ಲಿ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತ್ತು.
ಹೀಗಾಗಿ 2010ರಲ್ಲೂ ಅನಿಲ್ ಕುಂಬ್ಳೆ ನಾಯಕರಾಗಿದ್ದರು. ಇದಾದ ಬಳಿಕ 2011-12ರಲ್ಲಿ ಡೆನಿಯಲ್ ವಿಟ್ಟೋರಿ ಆರ್ಸಿಬಿ ನಾಯಕರಾಗಿದ್ದರು.
ಆ ನಂತರ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾದರು. ಅಲ್ಲಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಪರ್ವ ಆರಂಭವಾಯಿತು.
2013ರಿಂದ 2021ರವರೆಗೂ ತಂಡವನ್ನ ಮುನ್ನಡೆಸಿದ್ದ ಕೊಹ್ಲಿ, ತಂಡವನ್ನ ಒಂದೂ ಬಾರಿಯೂ ಚಾಂಪಿಯನ್ ಪಟ್ಟಕ್ಕೇರಿಸಲಿಲ್ಲ.
ಈ ನಡೆವೆ ಕಳೆದ ವರ್ಷ ಕ್ಯಾಪ್ಟನ್ ಸ್ಥಾನಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದರು. ಇದೀಗ 2022ರಲ್ಲಿ ಆರ್ಸಿಬಿ ತಂಡದ ಹೊಸ ನಾಯಕನಾಗಿ ಫಾಫ್ ಡುಪ್ಲೆಸ್ಸಿ ಆಯ್ಕೆಗೊಂಡಿದ್ದಾರೆ. ನೂತನ ನಾಯಕನಿಗೆ ವಿರಾಟ್ ಕೊಹ್ಲಿ ಶುಭ ಕೋರಿದ್ದಾರೆ.
faf du plessis rcb captain list