ನವದೆಹಲಿ: ಭಾರತೀಯ ಸೇನೆಗೆ ಮತ್ತೊಂದು ಮಹಾ ಅಸ್ತ್ರ ಶೀಘ್ರ ಸೇರಲಿದ್ದು, ಸೇನಾ ಬಲ ಮತ್ತಷ್ಟು ಹೆಚ್ಚಾಗಲಿದೆ. ವೈರಿಗಳ ನೆಲೆಯನ್ನು ನಿಖರವಾಗಿ ಗುರುತಿಸಿ ಕ್ಷಣಾರ್ಧದಲ್ಲೇ ಧ್ವಂಸ ಮಾಡುವ ಅತ್ಯಾಧುನಿಕ ಡ್ರೋಣ್ ನನ್ನು ರಕ್ಷಣಾ ಸಂಶೋಧನೆ ಮತ್ತು ಡಿಆರ್‍ಡಿಒ ಅಭಿವೃದ್ದಿ ಸಂಸ್ಥೆ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ.
ಅಭ್ಯಾಸ್ ಹೆಸರಿನ ಹೈ-ಸ್ಪೀಡ್ ಎಕ್ಸ್‍ಪಾಂಡೆಬಲ್ ಏರಿಯಲ್ ಟಾರ್ಗೆಟ್ ಡ್ರೋನ್‍ನನ್ನು ಯಶಸ್ವಿಯಾಗಿ ಹಾರಾಟ ಪರೀಕ್ಷೆಗೆ ಒಳಪಡಿಸಲಾಗಿದೆ. ಒಡಿಶಾದ ಬಾಲಾಸೋರ್‍ನ ಮಧ್ಯಂತರ ಪರೀಕ್ಷಾ ವಲಯದಲ್ಲಿ ಅಭ್ಯಾಸ್ ಡ್ರೋಣ್‍ನ ಹಾರಾಟ ಮತ್ತು ನಿಖರ ಗುರಿ ಮುಟ್ಟುವ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ. ಇದು ಅತ್ಯಂತ ವೇಗದ ವಿಸ್ತರಣಾ ವೈಮಾನಿಕ ಗುರಿ ಮುಟ್ಟುವ ಹಾರುವ ಡ್ರೋಣ್ ಆಗಿದ್ದು, ಅಭ್ಯಾಸ್ ಪರೀಕ್ಷಾರ್ಥ ಹಾರಾಟ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.








