ಮಂಡ್ಯ ಜಿಲ್ಲೆಯಲ್ಲಿ 115 KSRTC ಸಿಬ್ಬಂದಿಗಳಿಗೆ ಕೊವಿಡ್ ಪಾಸಿಟಿವ್..
KSRTC ಸಿಬ್ಬಂದಿಗಳಿಗೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಈವರೆಗೆ ಸುಮಾರು 115 KSRTC ಸಿಬ್ಬಂದಿಗಳಿಗೆ ಪಾಸಿಟಿವ್ ಪತ್ತೆಯಾಗಿದೆ ಎಂದು KSRTC ಡಿಟಿಓ ದೀನೇಶ್ ಕುಮಾರ್ ಹೇಳಿದ್ದಾರೆ
ಬಸ್ ಸಿಬ್ಬಂದಿಗಳು ಸಾರ್ವಜನಿಕರ ಮಧ್ಯೆ ಕೆಲಸ ಮಾಡುವ ನಿಟ್ಟಿನಲ್ಲಿ ಎಲ್ಲಾ ಸಿಬ್ಬಂದಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು.. ಈ ವೇಳೆ ಕೆ.ಆರ್.ಪೇಟೆಯಲ್ಲಿ 42 ಸಿಬ್ಬಂದಿಗಳಿಗೆ ಪಾಸಿಟಿವ್ ಧೃಡ ಪಟ್ಟಿದೆ ನಮ್ಮ ಸಿಬ್ಬಂದಿಗಳಲ್ಲಿ, ಯಾವುದೇ ರೋಗ ಲಕ್ಷಣಗಳು ಇಲ್ಲ, ಪಾಸಿಟಿವ್ ಬಂದಿರುವವರು ಹೋಂ ಐಶುಲೇಸನ್ ನಲ್ಲಿದ್ದಾರೆ..ನಮ್ಮ KSRTC ಕಾರ್ಯ ನಿರ್ವಹಣೆಗೆ ತೊಂದರೆಯಾಗದ ರೀತಿ ಸಿಬ್ಬಂದಿಗಳನ್ನ ನೇಮಕಗೊಳಸಲಾಗುವುದು ಎಂದು ತಿಳಿದ್ದಾರೆ.
ಮಂಡ್ಯ 7, ಮದ್ದೂರು 12, ಮಳವಳ್ಳಿ 8, ಕೆ.ಆರ್.ಪೇಟೆ 42, ನಾಗಮಂಗಲ 6, ಪಾಂಡವಪುರ 20, ವಿಭಾಗಿಯಾ ತನಿಖಾ ದಳ 1. ವಿಭಾಗಿಯಾ ಸಿಬ್ಬಂದಿ 19…ಗಳಿಗೆ ಕರೋನ ಕಾಣಿಸಿಕೊಂಡಿದೆ.
ವಾರದ ರಜೆಗಳನ್ನ ರದ್ದು ಮಾಡಿ ಬೇರೆ ಡಿಪೋಯಿಂದ ಸಪೋರ್ಟ್ ತೆಗೆದುಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ, ಹಾಗೂ ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗದ ರೀತಿ ಸಂಚಾರ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಡಿಫೋ, ಬಸ್ ನಿಲ್ದಾಣ ಹಾಗೂ ಬಸ್ ಗಳನ್ನು ಸ್ಯಾನಿಟೈಜ್ ಮಾಡಲಾಗಿದೆಎಲ್ಲರ ಮೇಲು ನಿಗಾ ವಹಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್, ಹಾಗೂ ಸ್ಯಾನಿಟೈಜ್ ಬಳಸುವಂತೆ ಸೂಚನೆ ನೀಡಲಾಗಿದೆ.