ಮೆಸ್ಕಾಂ ಅಧಿಕಾರಿಯ ಮನೆ ಮೇಲೆ ಎಸಿಬಿ ದಾಳಿ – Saaksha Tv
ಮಂಗಳೂರು: ಇಂದು ಬೆಳ್ಳಂ ಬೆಳಿಗ್ಗ ರಾಜ್ಯದ 78 ಕಡೆ ದಾಳಿ ನಡೆಸಿದ ಸಿಬಿ ಅಧಿಕಾರಿಗಳು ನಗರದ ಮೆಸ್ಕಾಂ ಅಧಿಕಾರಿಯ ಮನೆ ಹಾಗೂ ಕಚೇರಿ ಮೇಲೆ ಕೂಡಾ ದಾಳಿ ನಡೆಸಿದ್ದಾರೆ.
ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ದಯಾಲು ಸುಂದರ್ ರಾಜ್ ಮನೆ ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದರೆ. ನಗರದ ಮಲ್ಲಿಕಟ್ಟೆ ಸಮೀಪ ಬಾಡಿಗೆಗೆ ವಾಸವಾಗಿರುವ ವಿಜಯ ಅಪಾರ್ಟ್ಮೆಂಟ್ ಹಾಗೂ ಮೆಸ್ಕಾಂ ಕಚೇರಿ ಮೇಲೂ ದಾಳಿ ಮಾಡಲಾಗಿದೆ. ಎಸ್ಪಿ ಸಿ.ಎ.ಸೈಮನ್ ಹಾಗೂ ಕಾರವಾರ ಎಸಿಬಿ ನೇತೃತ್ವದ ತಂಡ ದಾಳಿ ನಡೆಸಿದೆ.
ಎಸಿಬಿ ಅಧಿಕಾರಿಗಳು ಎಲ್ಲಾ ದಾಖಲೆಗಳು, ಕಡತಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ದಯಾಲು ಸುಂದರ್ ರಾಜ್ ಅವರು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತ ಎಸಿಬಿ ದಾಳಿ ವೇಳೆ ದಯಾಲು ಬೆಂಗಳೂರಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.