ಆಕ್ಸೆಂಚರ್ ಅನ್ನು ಹಿಂದಿಕ್ಕಿದ TCS… ಈಗ ಇದು ನಂ 1 ಟಾಪ್ ಐ.ಟಿ ಕಂಪನಿ…!
ವಿಶ್ವದ ಹೆಚ್ಚು ಮೌಲ್ಯಯುತ ಐಟಿ ಸಂಸ್ಥೆ ಎನಿಸಿಕೊಂಡಿದ್ದ ಆಕ್ಸೆಂಚರ್ ಸಂಸ್ಥೆಯನ್ನ ಇದೀಗ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿ ಹಿಂದಿಟ್ಟಿದೆ. ಈ ಮೂಲಕ ದೇಶದ ಬಹುದೊಡ್ಡ ಐಟಿ ಕಂಪನಿಯಾಗಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿ ಜಗತ್ತಿನ ಖ್ಯಾತ ಐಟಿ ಕಂಪನಿ ಅಕ್ಸೆಂಚರ್ ಅನ್ನು ಹಿಂದಿಕ್ಕಿದೆ. ಟಿಸಿಎಸ್ ಮಾರುಕಟ್ಟೆ ಮೌಲ್ಯ 169.9 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ.
ರಣಾಂಗಣವಾದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ..!
ಮಾರುಕಟ್ಟೆ ಮೌಲ್ಯ ದಿಢೀರ್ ಏರಿಕೆ ಕಾಣುತ್ತಿದ್ದಂತೆ ಟಿಸಿಎಸ್ ಮಾರುಕಟ್ಟೆ ಮೌಲ್ಯ ಜನವರಿ 25ರ ಮಧ್ಯಾಹ್ನದ ವೇಳೆಗೆ 170 ಬಿಲಿಯನ್ ಡಾಲರ್ಗಿಂತಲೂ ಹೆಚ್ಚಾಗಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ನಂತರ 12 ಲಕ್ಷ ಕೋಟಿಗೂ ಹೆಚ್ಚು ಮಾರುಕಟ್ಟೆ ಕ್ಯಾಪ್ ಹೊಂದಿದ ಕಂಪನಿ ಎಂಬ ದಾಖಲೆಗೂ ಟಿಸಿಎಸ್ ಪಾತ್ರವಾಗಿದೆ.
ದೆಹಲಿ : ಪ್ರತಿಭಟನೆ ವೇಳೆ ಟ್ರ್ಯಾಕ್ಟರ್ ಪಲ್ಟಿ : ಓರ್ವ ಸಾವು
ಕಳೆದ ವರ್ಷ ಮಾರ್ಚ್ನಲ್ಲಿಯೂ ಟಿಸಿಎಸ್ ಕಂಪನಿಯು ದೇಶದ ಅತ್ಯಂತ ಮೌಲ್ಯಯುತ ಕಂಪನಿಯ ಸ್ಥಾನಕ್ಕೆ ಏರಿತ್ತು. ಬಿಎಸ್ಇನಲ್ಲಿ ಈ ತಿಂಗಳಿನಲ್ಲಿ ಕಂಪನಿಯ ಷೇರು ಶೇಕಡಾ 13ರಷ್ಟು ಗಳಿಕೆ ಸಾಧಿಸಿದೆ. ದಿನದ ವಹಿವಾಟಿನಲ್ಲಿ ಟಿಸಿಎಸ್ ಮಾರುಕಟ್ಟೆ ಮೌಲ್ಯವು ಡಾಲರ್ಗಳ ಲೆಕ್ಕದಲ್ಲಿ 169.26 ಬಿಲಿಯನ್ ಡಾಲರ್ಗೆ ತಲುಪಿತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








