ಕೌಲಾಲಂಪುರ್: ಮಲೇಷಿಯಾದಲ್ಲಿ ಪೂರ್ವಾಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ನೌಕಾಪಡೆಯ 2 ಹೆಲಿಕಾಪ್ಟರ್ ಗಳ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಕನಿಷ್ಠ 10 ಜನ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಇಂದು ಬೆಳಗ್ಗೆ 9.30ಕ್ಕೆ ಲುಮುಟ್ ನೌಕಾ ನೆಲೆಯಲ್ಲಿ ಈ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್ ಗಳ ಡಿಕ್ಕಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಮದಲ್ಲಿ ವೈರಲ್ ಆಗಿದೆ.
ಸದ್ಯದ ಮಾಹಿತಿಯಂತೆ, ರಾಯಲ್ ಮಲೇಷಿಯನ್ ನೇವಿ ಪರೇಡ್ಗಾಗಿ ಹೆಲಿಕಾಪ್ಟರ್ಗಳು ಪೂರ್ವಾಭ್ಯಾಸ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆಯಿಂದ ಹೆಲಿಕಾಪ್ಟರ್ ನಲ್ಲಿದ್ದ 10 ಜನ ಸಿಬ್ಬಂದಿ ಸಾವನ್ನಪ್ಪಿರುವ ಕುರಿತು ನೌಕಾಪಡೆ ಮಾಹಿತಿ ನೀಡಿದೆ.