ಬಾಗಲಕೋಟೆ: ಕಾರು ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಬಾಗಲಕೋಟೆ-ಬೆಳಗಾವಿ ರಸ್ತೆಯ ಸಂಶಿ ಕ್ರಾಸ್ ಹತ್ತಿರ ನಡೆದಿದೆ. ಘಟನೆಯಲ್ಲಿ ಪಾಂಡು ಅನವಾಲ(31) ಸಾವನ್ನಪ್ಪಿದ ದುರ್ದೈವಿ ಎನ್ನಲಾಗಿದೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.