heap ಆಕಸ್ಮಿಕ ಬೆಂಕಿ : ಮೆಕ್ಕೆಜೋಳ ರಾಶಿ ಭಸ್ಮ
ಹಾವೇರಿ : ಆಕಸ್ಮಿಕ ಬೆಂಕಿ ತಗುಲಿ ಮೆಕ್ಕೆಜೋಳ ರಾಶಿ ಭಸ್ಮವಾಗಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ.
20 ಎಕೆರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನ ಎಂಟು ಜನ ರೈತರು ಒಂದು ಕಡೆ ರಾಶಿ ಮಾಡಲು ಒಂದು ಕಡೆ ಹಾಕಿದ್ದರು. ಆದ್ರೆ ರಾಶಿ ಮಾಡಲು ಹಾಕಿದ್ದ ವೇಳೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಕರಕಲಾಗಿವೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಆದ್ರೆ ಅಷ್ಟೊತ್ತಿಗಾಗಲೇ ಮೆಕ್ಕೆಜೋಳ ಸುಟ್ಟು ಭಸ್ಮವಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ 700 ಕ್ವಿಂಟಾಲ್ ಗೂ ಅಧಿಕ ಮೆಕ್ಕೆಜೋಳ ಹಾನಿಯಾಗಿದೆ.
ವಿಷಯ ತಿಳಿದು ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸರಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.